

ಶಿವಮೊಗ್ಗ: ರೆಡಿಮೇಡ್ ಕಂಪೌಂಡ್, ವಾಲ್ ಪ್ಲೇಟ್ ಮತ್ತು ಪಟ್ಟಿಗಳನ್ನು ಸಾಗಿಸುವಾಗ ಭದ್ರಾವತಿ ತಾಲೂಕಿನ ಎಚ್.ಕೆ.ಜಂಕ್ಷನ್ ಬಳಿ ಭಾನುವಾರ ಮಧ್ಯಾಹ್ನ ಟ್ರಾಕ್ಟರ್ ಪಲ್ಟಿಯಾಗಿ ಕಾರ್ಮಿಕನೊಬ್ಬ ಮೃತಪಟ್ಟಿದ್ದಾನೆ. ತರೀಕೆರೆ ತಾಲೂಕಿನ ಲಿಂಗದಹಳ್ಳಿಯ ಪ್ರಕಾಶ್ ಮೃತರು.
ಲಿಂಗದಹಳ್ಳಿಯ ಶ್ರೀರಾಮ ಟ್ರೇಡಿಂಗ್ ರೆಡಿಮೇಡ್ ಕಂಪೌಂಡ್ ತಯಾರಿಸುವ ಕೆಲಸಕ್ಕೆ ಪ್ರಕಾಶ್ ತೆರಳುತ್ತಿದ್ದರು. ಅವರೊಂದಿಗೆ ಅಳಿಯ ಭರತ್ ಮತ್ತು ದಿಲೀಪ್ ಮತ್ತು ಮನೋಜ್‌ನಾಯ್ಕ ಕೂಡ ತೆರಳುತ್ತಿದ್ದರು. ಲಿಂಗದಹಳ್ಳಿಯಿಂದ ಶಿವಮೊಗ್ಗ ತಾಲೂಕಿನ ಆಯನೂರಿಗೆ ರೆಡಿಮೇಡ್ ಕಂಪೌಂಡ್, ವಾಲ್ ಪ್ಲೇಟ್ ಮತ್ತು ಪಟ್ಟಿಗಳನ್ನು ತರಿಕೆರೆ, ಲಕ್ಕವಳ್ಳಿ ಮಾರ್ಗವಾಗಿ ಸಾಗಿಸುವಾಗ ಜಂಕ್ಷನ್ ಬಳಿ ಮನೋಜ್ ನಾಯ್ಕ ಚಲಿಸುತ್ತಿದ್ದ ಟ್ರಾಕ್ಟರ್ ನಿಯಂತ್ರಣ ತಪ್ಪಿ ಪ್ಟಲಿಯಾಗಿದೆ.
ಈ ವೇಳೆ ಟ್ರೇಲರ್ ಮೇಲೆ ಕುಳಿತಿದ್ದ ಪ್ರಕಾಶ್, ಭರತ್ ಮತ್ತು ದಿಲೀಪ್ ಮೇಲೆ ರೆಡಿಮೇಡ್ ಕಂಪೌಂಡ್‌ಗಳು ಬಿದ್ದು ತೀವ್ರ ಗಾಯಗೊಂಡಿದ್ದರು. ಮೂವರನ್ನು ಸ್ಥಳೀಯರು 108 ಆಂಬುಲೆನ್ಸ್ ಮೂಲಕ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ಮೂವರನ್ನೂ ಪರೀಕ್ಷಿಸಿದ ವೈದ್ಯರು ಪ್ರಕಾಶ್ ಮೃತಪಟ್ಟಿದ್ದಾಗಿ ತಿಳಿಸಿದರು. ದಿಲೀಪ್‌ಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.