ವಿಕಲಚೇತನರಲ್ಲಿ ಸಾಧಿಸುವ ಅಪರೂಪದ ಕಲೆ ಅಡಗಿದೆ

15 ckm 2
ಚಿಕ್ಕಮಗಳೂರಿನ ಸ್ಕೌಟ್ಸ್ ಅಂಡ್ ಗೈಡ್ಸ್ ಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ರಾಜ್ಯ ಪರಿಸರ ತಜ್ಞರ ಮೌಲ್ಯಮಾಪಮ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಎ.ಎನ್.ಮಹೇಶ್ ಅವರನ್ನು ಜಿಲ್ಲಾ ವಿಕಲಚೇತನ ಪತ್ತಿನ ಸಹಕಾರ ಸಂಘದಿAದ ಸನ್ಮಾನಿಸಲಾಯಿತು. ಶಿವಮೂರ್ತಿ, ಮೋಹನ್ ಗೌಡ, ಚಂದ್ರಶೇಖರ್, ಸೋಮಶೇಖರ್, ಸುನೀಲ್, ಸರ್ವಮಂಗಳ, ಪ್ರಕಾಶ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಸಮಾಜದಲ್ಲಿ ಕಾಯಕನಿಷ್ಟೆ ಇಲ್ಲದವರು ಸೋಮಾರಿಗಳು. ಶರೀರದಲ್ಲಿ ಅಂಗವೈಕಲ್ಯತೆ ಹೊಂದಿದ್ದರು ಸಾಧಿಸುವ ಛಲಬಿಡದೇ ನಿರಂತರ ಪ್ರಯತ್ನದಿಂದ ರಾಜ್ಯ ಹಾಗೂ ರಾಷ್ಟç ಮಟ್ಟದಲ್ಲಿ ವಿಕಲಚೇತನರು ಮನ್ನಣೆಗಳಿಸಿರುವ ಉದಾಹರಣೆಗಳಿವೆ ಎಂದು ರಾಜ್ಯ ಪರಿಸರ ತಜ್ಞರ ಮೌಲ್ಯಮಾಪಮ ಸಮಿತಿ ಅಧ್ಯಕ್ಷ ಎ.ಎನ್.ಮಹೇಶ್ ತಿಳಿಸಿದರು.

ನಗರದ ಸ್ಕೌಟ್ಸ್ ಭವನದಲ್ಲಿ ಜಿಲ್ಲಾ ವಿಕಲಚೇತನ ಪತ್ತಿನ ಸಹಕಾರದಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಪರರಿಗೆ ಹೊರೆಯಾಗದಂತೆ ಸ್ವಾಭಿಮಾನದಿಂದ ಜೀವನ ನಡೆಸುತ್ತಿರುವ ವಿಕಲಚೇತನರು ಸಮಾಜದ ಪ್ರತಿಯೊಬ್ಬರಿಗೂ ಮಾದರಿ. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡುವ ಅಪರೂಪದ ಕಲೆ ಅವರಲ್ಲಿ ಅಡಗಿದೆ. ಸರ್ಕಾರದಿಂದ ಹಲವಾರು ಸೌಕರ್ಯಗಳು ವಿಕಲಚೇತನರಿಗೆ ಲಭ್ಯವಾಗಿರುವುದರಿಂದ ಅವರ ಜೀವನ ಸುಧಾರಣೆಗೆ ಸಹಕಾರಿಯಾಗಿದೆ ಎಂದರು.
ಪAಚಾಯಿತಿ ವ್ಯಾಪ್ತಿಗಳಲ್ಲಿ ವಿಕಲಚೇನರು ಇರುವ ಹಿನ್ನೆಲೆಯಲ್ಲಿ ಅಂತಹವರನ್ನು ಗುರುತಿಸಿ ಸಂಘಕ್ಕೆ ಸೇರ್ಪಡಿಸುತ್ತಿರುವುದು ಶ್ಲಾಘನೀಯ. ಅಂಗನ್ಯೂನ್ಯತೆ ಹೊರತುಪಡಿಸಿದರೆ ವಿಶಿಷ್ಟ ಶಕ್ತಿ ಹೊಂದಿರುವ ಅವರಿಗೆ ಆಸಕ್ತಿ ಹೊಂದಿರುವ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.
ಸAಘದ ಅಧ್ಯಕ್ಷ ಶಿವಮೂರ್ತಿ ಮಾತನಾಡಿ, ಜಿಲ್ಲೆಯಾದ್ಯಂತ ಸಾವಿರಕ್ಕೂ ಹೆಚ್ಚು ವಿಕಲಚೇತನರನ್ನು ಸಂಘಕ್ಕೆ ಸೇರ್ಪಡೆಗೊಳಿಸಿಕೊಳ್ಳಲಾಗಿದೆ. ಈ ಮೂಲಕ ಅವರಿಗೆ ಸಾಲಸೌಲಭ್ಯ ಸೇರಿದಂತೆ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಸಂಘ ಸ್ಥಾಪನೆ ಹಾಗೂ ಸರ್ಕಾರದ ಯೋಜನೆಗಳನ್ನು ಲಭಿಸುವ ನಿಟ್ಟಿನಲ್ಲಿ ಎ.ಎನ್.ಮಹೇಶ್ ಅವರ ಕೊಡುಗೆ ಅಪಾರವಾಗಿದೆ. ಸಂಕಷ್ಟದ ಸಮಯದಲ್ಲಿ ನೆರವಿಗೆ ಧಾವಿಸುವ ಅವರಿಗೆ ಸಂಘದ ಆಡಳಿತ ಮಂಡಳಿ ಹಾಗೂ ಸದಸ್ಯರುಗಳು ಚಿರಋಣಿ ಎಂದರು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಮೋಹನ್‌ಗೌಡ, ಕಾರ್ಯದರ್ಶಿ ಜೆ.ವೈ.ಚಂದ್ರಶೇಖರ್, ಮಾಜಿ ಅಧ್ಯಕ್ಷ ಸೋಮಶೇಖರ್, ಸದಸ್ಯರಾದ ಸುನೀಲ್, ಸರ್ವಮಂಗಳ, ಪ್ರಕಾಶ್, ವಸಂತರಾಜ್ ಅರಸ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net