ರಾಣಿ ಚನ್ನಮ್ಮ ವಿವಿ 10ನೇ ಘಟಿಕೋತ್ಸವ: ನಟ ರಮೇಶ ಅರವಿಂದ್ ಸೇರಿ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್​ಪ್ರದಾನ

ramesh aravind
Published on

ಬೆಳಗಾವಿ: ಸುವರ್ಣಸೌಧ ಸಭಾಂಗಣದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವ ಬುಧವಾರ ನಡೆಯಿತು. ನಗರಾಭಿವೃದ್ಧಿ ಕ್ಷೇತ್ರದ ಸಾಧಕ ರವಿಚಂದರ್ ವೆಂಕಟರಾಮನ್, ಸ್ಯಾಂಡಲ್​ವುಡ್​ ನಟ ರಮೇಶ್​ ಅರವಿಂದ್, ಸಾಮಾಜೋ ಧಾರ್ಮಿಕ ಕ್ಷೇತ್ರದ ಸಾಧಕಿ ಅಕ್ಕ ಅನ್ನಪೂರ್ಣ ತಾಯಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ‌ ಮಾಡಲಾಯಿತು.‌

ರಾಜ್ಯಪಾಲ ಥಾವರಚಂದ್ ಗೆಹಲೋಟ್ ಅವರು ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿ ಗೌರವಿಸಿದರು. ವಿವಿಧ ವಿಷಯವಾರು ವಿಭಾಗದಲ್ಲಿ ಅತಿ ಹೆಚ್ಚು ಅಂಕಗಳಿಸಿದ ನಾಲ್ವರು ವಿದ್ಯಾರ್ಥಿನಿಯರು ಸೇರಿದಂತೆ ಸಾಧಕ ವಿದ್ಯಾರ್ಥಿಗಳಿಗೆ ಒಟ್ಟು 11 ಸುವರ್ಣ ಪದಕ ವಿತರಿಸಲಾಯಿತು.‌

ಸ್ನಾತಕ ಪದವೀಧರ ವಿದ್ಯಾರ್ಥಿನಿಯರಾದ ರಸಿಕಾ ಮಲೈ(ಇಂಗ್ಲಿಷ್), ಸಂಜಿವೀನಿ ಪಾಟೀಲ(ಕನ್ನಡ), ವರ್ಷಾ ಮರ್ಡಿ(ಸೋಶಿಯಾಲಜಿ), ಪ್ರೇರಣಾ ಪನಾಲ್ಕರ್(ಕಾಮರ್ಸ್), ಬ್ಯಾಚುಲರ್ ಆಫ್ ಕಾಮರ್ಸ್ ವಿದ್ಯಾರ್ಥಿನಿ ವಿದ್ಯಾವತಿ ಗುಡೋದಗಿ, ಬ್ಯಾಚುಲರ್ ಆಫ್ ಸೈನ್ಸ್ ವಿದ್ಯಾರ್ಥಿನಿ ದೀಪಿಕಾ ಚೌವ್ಹಾಣ, ಮಾಸ್ಟರ್ ಆಫ್ ಆರ್ಟ್ಸ್ ಇನ್ ಕನ್ನಡ ವಿದ್ಯಾರ್ಥಿನಿ ದ್ರಾಕ್ಷಾಯಿಣಿ ವಾಲ್ಮಿಕಿ, ಮಾಸ್ಟರ್ ಆಫ್ ಆರ್ಟ್ಸ್ ಇನ್ ಸೋಶಿಯಾಲಜಿ ವಿದ್ಯಾರ್ಥಿ ತಾತ್ಯಾಸಾಬ್ ಧಾಬಡೆ, ಮಾಸ್ಟರ್ ಆಫ್ ಬಿಜಿನೆಸ್ ಅಡ್ಮಿನಿಸ್ಟ್ರೇಷನ್ ವಿದ್ಯಾರ್ಥಿನಿ ಗೌರಾ ಅಣೆಪ್ಪನವರ, ಮಾಸ್ಟರ್ ಆಫ್ ಸೈನ್ಸ್ ಇನ್ ಮ್ಯಾಥೆಮ್ಯಾಟಿಕ್ಸ್ ವಿದ್ಯಾರ್ಥಿನಿ ಅನುಜಾ ಪಾಟೀಲ ಅವರಿಗೆ ಸುವರ್ಣ ಪದಕ ಒಲಿದಿದೆ.

ಕುಲಪತಿ ಪ್ರೊ.ಎಂ.ರಾಮಚಂದ್ರ ಗೌಡ, ಕೇಂದ್ರ ಬುಡಕಟ್ಟು ವಿವಿ ಕುಲಪತಿ ಪ್ರೊ.ಟಿ.ವಿ.ಕಟ್ಟಿಮನಿ, ಮೌಲ್ಯಮಾಪನ ಕುಲಸಚಿವ ಪ್ರೊ.ಶಿವಾನಂದ ಗೊರನಾಳೆ, ಪ್ರೊ.ಎಂ. ಹನುಮಂತಪ್ಪ, ಸಿಡಿಸಿ ನಿರ್ದೇಶಕ ಪ್ರೊ. ಗಂಗಾಧರಯ್ಯ, ಸಿ.ಎನ್. ವಾಗ್ಮಾರೆ ಸೇರಿ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net