ರಮೇಶ್​ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಸಾಲ ಪಾವತಿಸುತ್ತಿಲ್ಲ...

ramesh jarakiholi- lakshmi hebbalkar
Published on

ಬೆಳಗಾವಿ: ಸಹಕಾರ ಕ್ಷೇತ್ರದಲ್ಲಿ ಕೇವಲ ರಮೇಶ್​ ಜಾರಕಿಹೊಳಿಯವರದ್ದು ಮಾತ್ರ ಸಾಲ ಇಲ್ಲ, ಲಕ್ಷ್ಮೀ ಹೆಬ್ಬಾಳ್ಕರ್, ಬಂಡೆಪ್ಪ ಕಾಶಂಪೂರ ಕೂಡ ಬಾಕಿ ಉಳಿಸಿಕೊಂಡಿದ್ದಾರೆ. ಅವರಿಗೆಲ್ಲ ನೋಟಿಸ್​ ನೀಡಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್​ ಹೇಳಿದರು.

ಬೆಳಗಾವಿ ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಶೇಖರ್, ರಮೇಶ್​ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ 25 ಸಕ್ಕರೆ ಕಾರ್ಖಾನೆ ಮಾಲೀಕರು ಸಾಲ ಪಡೆದಿದ್ದಾರೆ. ಆದರೆ, ಅವರು ಮರು ಪಾವತಿಸಿಲ್ಲ. ‌6 ಸಾವಿರ ಕೋಟಿ ರೂ. ಸಾಲ ಬಾಕಿ ಉಳಿದಿದೆ ಎಂದರು. ಕೆಲವರು ಬಡ್ಡಿಯನ್ನೂ ಕಟ್ಟಿಲ್ಲ. ದಕ್ಷಿಣ ಕನ್ನಡ, ತುಮಕೂರು ಡಿಸಿಸಿ ಬ್ಯಾಂಕ್​ನಿಂದ ಸಾಲ ಪಡೆದಿದ್ದಾರೆ. ರಾಜ್ಯದಲ್ಲಿ 6 ಸಾವಿರ ಕೋಟಿ ರೂಪಾಯಿ ಸಾಲ ಬಾಕಿ ಉಳಿದಿದೆ. ಇದನ್ನು ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net