'ನಾನು ಬಡವ, ನನ್ನ ಕತ್ತು ಸೀಳ ಬೇಡಿ...' ಪೋಸ್ಟರ್​ ಹಿಡಿದು ಮೈಸೂರಲ್ಲಿ ರಸ್ತೆಬದಿ ವ್ಯಾಪಾರಿಗಳ ಅಭಿಯಾನ

New Project(27)
Published on

ಮೈಸೂರು: 'ನಾನು ಬಡವ, ನನ್ನ ಕತ್ತು ಸೀಳ ಬೇಡಿ' ಎಂದು ಮೈಸೂರು ಜಿಲ್ಲೆ ನಂಜನಗೂಡು ಮತ್ತು ಟೀ.ನರಸೀಪುರ ತಾಲೂಕುಗಳಲ್ಲಿ ಬೀದಿಬದಿ ವ್ಯಾಪಾರಸ್ಥರ ವಿಭಿನ್ನ ರೀತಿಯ ಅಭಿಯಾನ ಶುರು ಮಾಡಿದ್ದಾರೆ.

ಉದಯಪುರದಲ್ಲಿ ಟೈಲರ್​ ಕನ್ಹಯ್ಯರ ಹತ್ಯೆ ಖಂಡಿಸಿ ದೇಶಾದ್ಯಂತ ಹೋರಾಟ ನಡೆಯುತ್ತಿದೆ. ರಾಜ್ಯದಲ್ಲೂ ಹಿಂದುಪರ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿವೆ. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಆಗ್ರಹಿಸುತ್ತಿವೆ. ಮೈಸೂರು ಜಿಲ್ಲೆಯಲ್ಲೂ ಟೈಲರ್​ ಕನ್ಹಯ್ಯ ಹತ್ಯೆ ಖಂಡಿಸಿ ವಿಭಿನ್ನ ರೀತಿಯಲ್ಲಿ ಅಭಿಯಾನ ಆರಂಭಿಸಲಾಗಿದೆ.

ಹಿಂದು ಕಾರ್ಯಕರ್ತರು ಮತ್ತು ಹಿಂದು ವ್ಯಾಪಾರಸ್ಥರು 'ನಾನು ಸತ್ಯ ಹೇಳಲ್ಲ, ಸತ್ಯ ಹೇಳುವವರ ಪರವೂ ನಿಲ್ಲಲ್ಲ. ನಾನು ಬಡವ, ನನ್ನ ಕತ್ತು ಸೀಳಬೇಡಿ' ಎಂಬ ಬರಹವುಳ್ಳ ಪೋಸ್ಟರ್​ ಹಿಡಿದು ಅಭಿಯಾನ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net