ಕಳಸದಲ್ಲಿ ತಂಪೆರೆದ ಮಳೆರಾಯ

19kls1
ಕಳಸದಲ್ಲಿ ಸುರಿದ ಮಳೆಗೆ ಕಳಸ ಮುಖ್ಯ ರಸ್ತೆಯಲ್ಲಿ ನೀರು ಹರಿಯುತ್ತಿರುವುದು.
Published on

ಕಳಸ: ಕಳಸದಲ್ಲಿ ಸುರಿದ ಮಳೆಯಿಂದ ಬಿಸಿಲಿನಿಂದ ಬಸವಳಿದ ಜನತೆಗೆ ತಂಪು ಮೂಡಿಸಿದೆ. ಸಂಜೆ ಸುರಿದ ಮಳೆಗೆ ತಾಲೂಕಿನ ಕೆಳಬೈಲು ಗ್ರಾಮದ ಪೈಂಟರ್ ಬಾಬು ಅವರ ಮನೆ ಮೇಲೆ ಮರ ಬಿದ್ದು ಮನೆಗೆ ಹಾನಿಯಾಗಿದೆ. ಅದೇ ಗ್ರಾಮದಲ್ಲಿ ವಿದ್ಯುತ್ ಕಂಬದ ಮೇಲೆ ಮರ ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಜೋರಾಗಿ ಸುರಿದ ಮಳೆಯಿಂದ ಕಳಸ ಮುಖ್ಯ ರಸ್ತೆಯಲ್ಲಿ ನೀರು ತುಂಬಿ ಹರಿಯಿತು. ಕಾಫಿ,ಅಡಕೆ ಮುಂತಾದ ಕೃಷಿ ಚಟುವಟಿಕೆಗಳಿಗೆ ಈ ವೇಳೆ ಮಳೆ ಅಗತ್ಯವಾಗಿದ್ದರಿಂದ ಕೃಷಿಕರಲ್ಲಿ ತುಸು ನೆಮ್ಮದಿ ಮೂಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net