ಮಳೆ ನೀರು ನುಗ್ಗಿ ಕೆಪಿಟಿಸಿಎಲ್ ಉಪ ಕೇಂದ್ರದಲ್ಲಿ ಸಿಲುಕಿದ್ದ ಇಬ್ಬರ ರಕ್ಷಣೆ

rain
Published on

ದಾವಣಗೆರೆ: ಶನಿವಾರ ರಾತ್ರಿ ಸುರಿದ ಭಾರಿ ಮಳೆಯಿಂದ ದಾವಣಗೆರೆ ತಾಲೂಕು ಕಾಡಜ್ಜಿ ಬಳಿಯ ಹಳ್ಳ ತುಂಬಿ, ಸಮೀಪದ ಕೆಪಿಟಿಸಿಎಲ್ ಉಪ ಕೇಂದ್ರಕ್ಕೆ ನುಗ್ಗಿ, ಅಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಇಬ್ಬರು ಸಿಬ್ಬಂದಿಯನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ.

ಉಪ ಕೇಂದ್ರದೊಳಗೆ 3 ರಿಂದ 4 ಅಡಿಯಷ್ಟು ನೀರು ನುಗ್ಗಿದ್ದರಿಂದ ಆಪರೇಟರ್ ಸಂತೋಷ ಕುಮಾರ್ ಮತ್ತು ಸಹಾಯಕ ಕೃಷ್ಣಪ್ರಸಾದ್ ಅಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ತಡರಾತ್ರಿ ದೊರೆತ ಮಾಹಿತಿ ಆಧರಿಸಿ ಸ್ಥಳಕ್ಕೆ ತೆರಳಿದ ಅಗ್ನಿಶಾಮಕ ಸಿಬ್ಬಂದಿ ಹಗ್ಗದ ಸಹಾಯದಿಂದ ಕಾರ್ಯಾಚರಣೆ ನಡೆಸಿ ಇಬ್ಬರನ್ನು ರಕ್ಷಿಸಿದರು.

ಕಾಡಜ್ಜಿ ಗ್ರಾಮದಲ್ಲಿ ಮಳೆಯಿಂದ ಮರ ಬಿದ್ದಿದ್ದರಿಂದ ತಮ್ಮ ವಾಹನ ಮುಂದೆ ಹೋಗಲು ಆಗಲಿಲ್ಲ. ರಭಸದಿಂದ ಹರಿಯುತ್ತಿದ್ದ ಹಳ್ಳವನ್ನು ದಾಟಿ ಹೋಗಿ ಕಾರ್ಯಾಚರಣೆ ನಡೆಸಲಾಯಿತು ಎಂದು, ನೇತೃತ್ವ ವಹಿಸಿದ್ದ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಸವಪ್ರಭು ಶರ್ಮ ತಿಳಿಸಿದರು.

ದಾವಣಗೆರೆ ನಗರದ ಹೊರವಲಯದ ಬೈಪಾಸ್ ನಲ್ಲಿರುವ ಹದಡಿ ರೋಡ್​ನ ಸೇತುವೆ ಕೆಳಗೆ ನೀರಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಕಾರೊಂದನ್ನು ಅಗ್ನಿಶಾಮಕ ಸಿಬ್ಬಂದಿ ಹೊರ ತೆಗೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net