

ಮಡಿಕೇರಿ: ಕೊಡಗು ಪ್ರೆಸ್ ಕ್ಲಬ್ ಸೌಹಾರ್ದ ಸಹಕಾರಿ ಸಂಘ ನಿಯಮಿತದ ಅಧ್ಯಕ್ಷರಾಗಿ ಅಜ್ಜಮಾಡ ರಮೇಶ್ ಕುಟ್ಟಪ್ಪ ಹಾಗೂ ಉಪಾಧ್ಯಕ್ಷರಾಗಿ ಕೆ.ಕೆ.ರೆಜಿತ್ ಕುಮಾರ್ ಗುಹ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಆಡಳಿತ ಮಂಡಳಿ ನಿರ್ದೇಶಕರಾಗಿ ಬಿ.ಆರ್.ಸವಿತಾ ರೈ, ಅಜ್ಜಿನಿಕಂಡ ಪ್ರಮೀಳಾ ನಾಚಯ್ಯ, ಎಂ.ಎನ್.ಚಂದ್ರಮೋಹನ್, ಆರ್.ಸುಬ್ರಮಣಿ, ಪುತ್ತಂ ಪ್ರದೀಪ್ ಬಾಲನ್, ಚೀಯಂಡಿ ತೇಜಸ್ ಪಾಪಯ್ಯ, ವಿ.ವಿ.ಅರುಣ್ ಕುಮಾರ್, ಈ.ಆರ್.ವಿಶ್ವ ಕುಮಾರ್, ಕೆ.ಕೆ.ನಾಗರಾಜ ಶೆಟ್ಟಿ, ಸಂತೋಷ್ ರೈ, ಕೆ.ಬಿ.ಶಂಶುದ್ದೀನ್, ಎಚ್.ಸಿ.ಜಯಪ್ರಕಾಶ್, ಕೆ.ಬಿ.ದಿವಾಕರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮುಂದಿನ ಐದು ವರ್ಷಾವಧಿಗೆ ಈ ಆಡಳಿತ ಮಂಡಳಿ ಜವಾಬ್ದಾರಿ ನಿರ್ವಹಿಸಲಿದೆ. ಚುನಾವಣಾಧಿಕಾರಿಯಾಗಿ ಸಂಜಯ ಪಿ.ಕುರಳುಪ್ಪ ಕಾರ್ಯನಿರ್ವಹಿಸಿದರು.