ವಿದ್ಯಾರ್ಥಿಗಳ ಜ್ಞಾನಮಟ್ಟ ಅಳೆಯುವ ರಸಪ್ರಶ್ನೆ ಕಾರ್ಯಕ್ರಮ

A quiz program to measure the knowledge level of students
ವಿಜಯಪುರ ನಗರದ ಶ್ರೀ ಬಿ.ಎಂ. ಪಾಟೀಲ ವೈದ್ಯಕಿಯ ಮಹಾವಿದ್ಯಾಲಯದಲ್ಲಿ ಎಂಬಿಬಿಎಸ್​ ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ ಸರ್ಜಿಕ್ವಿಜ್​&2024 ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಡಾ. ಮಂಜುನಾಥ ಕೋಟೆಣ್ಣವರ, ಡಾ. ಅರವಿಂದ ಪಾಟೀಲ, ಡಾ. ಜಿಲಾನಿ ಅವಟಿ ಮತ್ತಿತರರಿದ್ದಾರೆ.
Published on

ವಿಜಯಪುರ: ವಿದ್ಯಾರ್ಥಿಗಳ ಪ್ರತಿಭಾನ್ವೇಷಣೆಗೆ ರಸಪ್ರಶ್ನೆ ಕಾರ್ಯಕ್ರಮ ಸೂಕ್ತ ವಿಧಾನವಾಗಿದೆ. ರಸಪ್ರಶ್ನೆಗಳಿಂದ ವಿದ್ಯಾರ್ಥಿಗಳ ಜ್ಞಾನದ ಜತೆಗೆ ಸಮಯಪ್ರಜ್ಞೆ, ವಿಶ್ಲೇಷಣಾ ಶಕ್ತಿ ಮತ್ತು ಗುಂಪಿನ ಇತರ ಸದಸ್ಯರೊಂದಿಗಿನ ಸಮನ್ವಯತೆ ಅಳೆಯುವ ಮಹತ್ವದ ಸಾಧನವಾಗಿವೆ ಎಂದು ಬಿಎಲ್​ಡಿಇ ಸಂಸ್ಥೆಯ ಬಿ.ಎಂ. ಪಾಟೀಲ ವೈದ್ಯಕಿಯ ಮಹಾವಿದ್ಯಾಲಯದ ಶಸಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಕೋಟೆಣ್ಣವರ ಹೇಳಿದರು.

ನಗರದ ಬಿಎಲ್​ಡಿ ಡೀಮ್ಡ್​ ವಿಶ್ವವಿದ್ಯಾಲಯದ ಶ್ರೀ ಬಿ.ಎಂ. ಪಾಟೀಲ ವೈದ್ಯಕಿಯ ಮಹಾವಿದ್ಯಾಲಯದ ಸ್ಕಿಲ್ಸ್​ ಲ್ಯಾಬೊರೇಟರಿ ಕಟ್ಟಡದ ಸಭಾಂಗಣದಲ್ಲಿ ಶಸಚಿಕಿತ್ಸಾ ವಿಭಾಗದ ವತಿಯಿಂದ ಎಂಬಿಬಿಎಸ್​ ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ ಶನಿವಾರ ನಡೆದ ಸರ್ಜಿಕ್ವಿಜ್​&2024 ಎಂಬ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಾಚಾರ್ಯ ಡಾ. ಅರವಿಂದ ಪಾಟೀಲ ಮಾತನಾಡಿ, ರಸಪ್ರಶ್ನೆ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ ಹೊರತರಲು ತುಂಬ ಸಹಕಾರಿಯಾಗಿವೆ ಎಂದರು.

ಶಸಚಿಕಿತ್ಸಾ ವಿಭಾಗದಲ್ಲಿ ಅನುಪಮ ಸೇವೆ ಸಲ್ಲಿಸಿದ ಪ್ರಾಧ್ಯಾಪಕರ ಸ್ಮರಣಾರ್ಥ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ತಲಾ 3 ವಿದ್ಯಾರ್ಥಿಗಳ 5 ತಂಡ ರಚಿಸಲಾಗಿತ್ತು. ರಸಪ್ರಶ್ನೆಗೂ ಮುಂಚಿತವಾಗಿ ಪೂರ್ವಭಾವಿ ಪರೀೆ ಮುಖಾಂತರ ಅಂತಿಮ ಸುತ್ತಿಗೆ 15 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು.

ಕ್ವಿಜ್​ ಮಾಸ್ಟರ್​ ಸಹ ಪ್ರಾಧ್ಯಾಪಕ ಡಾ. ದೀಪಕ ಚವಾಣ ಕಾರ್ಯಕ್ರಮ ಉದ್ಘಾಟಿಸಿದರು. ಡಾ. ಬಿ.ಸಿ. ಉಪ್ಪಿನ ತಂಡದ ವಿದ್ಯಾರ್ಥಿಗಳಾದ ಸಾಜೊ ಜೋಸೆಫ್​, ಸಚೇತ ಪದುಮತಿ ಮತ್ತು ಅಮೋ ಲವಟೆ ಬಂಗಾರದ ಪದಕ ಪಡೆದುಕೊಂಡರು. ಡಾ. ಡಿ.ಸಿ. ಪಾಟೀಲ ತಂಡದ ವಿದ್ಯಾರ್ಥಿಗಳಾದ ಕ್ರಿಷ್ಟು ನರಸಿಂನಿ, ಆಯುಷ ಪಾರಖ ಮತ್ತು ಓಂ ಢೇರೆ ಬೆಳ್ಳಿಯ ಪದಕ ಪಡೆದು ರನ್ನರ್​ ಅಪ್​ ಸ್ಥಾನ ಅಲಂಕರಿಸಿದರು.

ವಿಜೇತ ವಿದ್ಯಾರ್ಥಿಗಳಿಗೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಲ್​ ಅಮೀನ್​ ವೈದ್ಯಕಿಯ ಮಹಾವಿದ್ಯಾಲಯ ಆಸ್ಪತ್ರೆಯ ವೈದ್ಯಕಿಯ ಅಧೀಕ ಡಾ. ಜಿಲಾನಿ ಅವಟಿ ಮತ್ತು ಬಿ.ಎಂ. ಪಾಟೀಲ, ವೈದ್ಯಕಿಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಅರವಿಂದ ಪಾಟೀಲ ಪ್ರಮಾಣ ಪತ್ರ ಮತ್ತು ಪದಕ ನೀಡಿ ಗೌರವಿಸಿದರು. 160 ಪ್ರೇಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪ್ರಾಧ್ಯಾಪಕಿ ಡಾ. ತೇಜಸ್ವಿನಿ ವಲ್ಲಭ, ಡಾ. ಗಿರೀಶ ಕುಲ್ಲೊಳ್ಳಿ, ಡಾ. ರಮಾಕಾಂತ ಬಳೂರಕರ, ಸಹ ಪ್ರಾಧ್ಯಾಪಕರಾದ ಡಾ. ದಯಾನಂದ ಬಿರಾದಾರ, ಡಾ.ಎಸ್​.ಎಸ್​. ಪಾಟೀಲ, ಸಹಾಯಕ ಪ್ರಾಧ್ಯಾಪಕರಾದ ಡಾ. ಮಂಜುನಾಥ ಸಾವಂತ, ಡಾ. ಶಿವರಾಜ ಮಂಗ್ಯಾಳ, ಡಾ. ವಿಜಯ ಈಶ್ವರಪ್ಪಗೋಳ, ಡಾ. ವೀಣಾ ಘಟೆಪ್ಪಗೋಳ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net