ವಾಣಿಜ್ಯ ನಗರಿಯಲ್ಲಿ ತುರುಸಿನ ಮತದಾನ

h7-Kamari peth 1
Published on

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮಂಗಳವಾರ ಬೆಳಗ್ಗೆಯಿಂದಲೇ ತುರುಸಿನ ಮತದಾನ ನಡೆಯಿತು. ಮಧ್ಯಾಹ್ನ ಬಿರುಬಿಸಿಲು ಇದ್ದಿ್ದ್ದರಿಂದ ತುಸು ಕಡಿಮೆ ಆಗುತ್ತಿದ್ದರೂ, ಸಂಜೆ ಹೊತ್ತಿಗೆ ಮತ್ತೆ ಬಿರುಸು ಕಂಡಿತು.

ನಗರದ ಕೇಶ್ವಾಪುರ, ವಿದ್ಯಾನಗರ, ನವೀನಪಾರ್ಕ್, ಶಿರೂರಪಾರ್ಕ್ ಸೇರಿದಂತೆ ಇತರೆಡೆ ಮತದಾನ ನಡೆಯಿತು. ಮತದಾರರು ಉತ್ಸಾಹದಿಂದಲೇ ಪಾಲ್ಗೊಂಡಿದ್ದರು. ಗಣ್ಯರು ಕೂಡ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಕೆಲವರ ಹೆಸರು ಮತಪಟ್ಟಿಯಿಂದ ಕೈಬಿಟ್ಟಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಹೊಸದಾಗಿ ಮತಪಟ್ಟಿಯಲ್ಲಿ ಹೆಸರು ಸೇರ್ಪಡೆಯಾದ ಯುವ ಮತದಾರರು ಮತದಾನ ಮಾಡಿ, ಕರ್ತವ್ಯ ಮೆರೆದರು. ನೃಪತುಂಗ ಬೆಟ್ಟದ ಕೆಳಗಿರುವ ಜನತಾ ಶಾಲೆಯ ಮತಗಟ್ಟೆ ಸಂಖ್ಯೆ 87, ಬೆಂಗೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ ಸಂಖ್ಯೆ 117 ಸೇರಿದಂತೆ ಕೆಲವೆಡೆ ವಿವಿ ಪ್ಯಾಟ್​ನಲ್ಲಿ ದೋಷ ಕಂಡುಬಂದಿದ್ದರಿಂದ ಚುನಾವಣಾಧಿಕಾರಿಗಳು ಅವುಗಳನ್ನು ಬದಲಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net