ತುಳುವೇಶ್ವರ ದೇವಾಲಯದಲ್ಲಿ ಆರೂಢ ಪ್ರಶ್ನೆ ಚಿಂತನೆ

gan-2
Published on

ಕುಂದಾಪುರ: ಇಲ್ಲಿನ ಬಸ್ರೂರಿಲ್ಲಿರುವ ತುಳುವೇಶ್ವರ ದೇವಾಲಯ ಜೀರ್ಣೋದ್ಧಾರಕ್ಕೆ ತುಳುವರ್ಲ್ಡ್ ಫೌಂಡೇಶನ್ ವತಿಯಿಂದ ಭಾನುವಾರ ಆರೂಢ ಪ್ರಶ್ನೆ ಚಿಂತನೆ ನಡೆಯಿತು.

ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ.ಅಪ್ಪಣ್ಣ ಹೆಗ್ಡೆ ಮಾರ್ಗದರ್ಶನದಲ್ಲಿ ತುಳುವೇಶ್ವರ ದೇವಸ್ಥಾನ ಅರ್ಚಕ ಮಹೇಶ್ ಕಿಣಿ ಸಂಚಾಲಕತ್ವ ವಹಿಸಿದ್ದರು. ತುಳುವರ್ಲ್ಡ್ ಫೌಂಡೇಶನ್ ಡಾ.ರಾಜೇಶ್ ಆಳ್ವ ನೇತೃತ್ವದಲ್ಲಿ ಜ್ಯೋತಿಷ್ಯ ತಿಲಕಂ ಶಶಿಧರ ಮಾಂಗಡ್ ಅವರಿಂದ ಪ್ರಶ್ನೆ ಚಿಂತನೆ ನೆರವೇರಿತು. ಸೆಪ್ಟಂಬರ್‌ನಲ್ಲಿ ಅನಿರ್ದಿಷ್ಟಾವಧಿ ಅಷ್ಟಮಂಗಲ ಪ್ರಶ್ನೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net