ಎರಡು ಕುಟುಂಬಗಳ ನಡುವೆ ಕಲಹ

A quarrel between two families
ಇಂಡಿ ತಾಲೂಕಿನ ತೆನೆಹಳ್ಳಿ ಗ್ರಾಮದಲ್ಲಿ ಸಿಪಿಐ ಮಲ್ಲಿಕಾರ್ಜುನ ಡಪ್ಪಿನ ಮತ್ತು ಪಿಎಸ್‌ಐ ಸೋಮೇಶ ಗೆಜ್ಜೆ ಸ್ಥಳದಲ್ಲಿ ಬಿಡಾರ ಹೂಡಿ ಕಾನೂನು ಸುವ್ಯವಸ್ಥೆ ಕಾಪಾಡಿದರು.
Published on

ಇಂಡಿ: ತಾಲೂಕಿನ ತೆನೆಹಳ್ಳಿ ಗ್ರಾಮದಲ್ಲಿ ಒಂದೇ ಕೋಮಿನ ಎರಡು ಕುಟುಂಬಗಳ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ, ಒಬ್ಬರಿಗೊಬ್ಬರು ಇಟ್ಟಿಗೆ, ಕಟ್ಟಿಗೆ ಬಡಿಗೆಗಳಿಂದ ಹೊಡೆದಾಡಿಕೊಂಡಿದ್ದು ಎರಡೂ ಕುಟುಂಬದ ಹಲವರು ಗಾಯಗೊಂಡ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಗಾಯಾಳುಗಳನ್ನು ವಿಜಯಪುರ, ಸೋಲಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂಡಿ ಗ್ರಾಮೀಣ ಪಿಎಸ್‌ಐ ಸೋಮೇಶ ಗೆಜ್ಜಿ, ಸಿಪಿಐ ಮಲ್ಲಿಕಾರ್ಜುನ ಡಪ್ಪಿನ ಸ್ಥಳಕ್ಕೆ ಧಾವಿಸಿ ಶಾಂತಿ ಕಾಪಾಡಿದ್ದಾರೆ.

ಘಟನೆ ವಿವರ : ಎಂಟು ದಿನಗಳ ಹಿಂದೆ ಗ್ರಾಮದಲ್ಲಿ ನಾಗೇಶ ಹಿರೇಮಠ ಅವರ ಮದುವೆ ಸಮಾರಂಭವಿದ್ದು, ಅದರಲ್ಲಿ ಗ್ರಾಮದ ನಿವಾಸಿ, ತಾಲೂಕು ಯುವ ಘಟಕ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶಹನಸಹಾ ಜಹಾಗೀರ ಹಾಗೂ ಸಂಗಡಿಗರು ಡಾನ್ಸ್ ಮಾಡಿದ್ದು. ಆ ವಿಡಿಯೋವನ್ನು ತಮ್ಮ ಸ್ಟೇಟಸ್‌ನಲ್ಲಿ ಇಟ್ಟುಕೊಂಡಿದ್ದರಂತೆ. ಇದನ್ನು ಪ್ರಶ್ನಿಸಿ ಗ್ರಾ.ಪಂ. ಸದಸ್ಯ ಇಜಾಜ್ ಜಹಾಗೀರದಾರ ತಕರಾರು ತೆಗೆದಿದ್ದಾರೆ. ಇವರಿಬ್ಬರೂ ವಿಜಯಪುರದಲ್ಲಿ ವಾಸಮಾಡುತ್ತಿದ್ದು, ಹಲ್ಲೆ ಮಾಡಲು ತಮ್ಮ ಸಂಗಡಿಗರನ್ನು ಕಳಿಸಿದ್ದಾರೆ ಎಂದು ಹೇಳಲಾಗಿದೆ.

ಮಾತಿಗೆ ಮಾತು ಬೆಳೆದು ಎರಡೂ ಕುಟುಂಬದ ನಡುವೆ ವಾಗ್ವಾದವಾಗಿ ವಿಕೋಪಕ್ಕೆ ತಿರುಗಿದ್ದು, ಕೆಲವರು ಇಟ್ಟಿಗೆ, ಕಟ್ಟಿಗೆ ಬಡಿಗೆಯಿಂದ ಒಬ್ಬರಿಗೊಬ್ಬರು ಬಡಿದಾಡಿಕೊಂಡಿದ್ದಾರೆ. ಇಂಡಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net