

ವಿಜಯಪುರ: ನೀಲಕಮಲ್‌ನ ಪರಿಕರಗಳು ಉತ್ಕಷ್ಟ ಗುಣಮಟ್ಟದ್ದಾಗಿದ್ದು, ರೆಡಿ ಫರ್ನಿಚರ್ಸ್ ಹಾಗೂ ಮ್ಯಾಟ್ರೆಸ್ ವರ್ಟಿಕಲ್ಸ್‌ನಲ್ಲೂ ಯಶಸ್ವಿಯಾಗಿದ್ದು, ಇದರ ಉತ್ಪನ್ನಗಳ ಶ್ರೇಣಿ ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದೆ ಎಂದು ಸಂಸ್ಥೆಯ ಹಿರಿಯ ಪ್ರಧಾನ ವ್ಯವಸ್ಥಾಪಕ ಚೇತನ್ ಕುಮಾರ್ ಹೇಳಿದರು.
ಗುರುವಾರ, ನಗರದ ಪಾಟೀಲ್ ಗಾರ್ಡೆನಿಯ ಎದುರಿನಲ್ಲಿರುವ ಗಣಿ ಫರ್ನಿಚರ್ ಮಾಲ್‌ನ ನೆಲಮಹಡಿಯಲ್ಲಿ ರಾಜ್ಯದ 9 ನೇ ನೀಲ್‌ಕಮಲ್ @ home ನ ನೂತನ ಶೋರೂಂ ಉದ್ಘಾಟಿಸಿ ಅವರು ಮಾತನಾಡಿ, ನೀಲಕಮಲ್ ಕಂಪನಿ ತನ್ನ ಚಿಲ್ಲರೆ ವಿಭಾಗವನ್ನು ವಿಸ್ತರಿಸುತ್ತಿದ್ದು, ದೇಶದಲ್ಲಿ ಒಟ್ಟು 30 ಶೋರೂಂಗಳಿವೆ. ಈ ಶೋರೂಂ ಒಟ್ಟು 7500 ಚದರ ಅಡಿಯಿದ್ದು, ಇದರಲ್ಲಿ ಫರ್ನಿಚರ್ಸ್, ಸಾಫ್ಟ್ ಫರ್ನಿಶಿಂಗ್, ಡೆಕರ್, ಕಿಚರ್‌ವೇರ್, ಡಿನ್ನರ್‌ವೇರ್ ಮತ್ತು ಮ್ಯಾಟ್ರೆಸ್‌ಗೆ ಸಂಬಂಧಿಸಿದ ಸರಿಸುಮಾರು 7000 ಉತ್ಪನ್ನಗಳು ಇವೆ ಎಂದು ಮಾಹಿತಿ ನೀಡಿದರು.
ಆಯ್ದ ಉತ್ಪನ್ನಗಳ ಮೇಲೆ ಸೀಮಿತ ಅವಧಿಯವರೆಗೆ ನೇರವಾಗಿ ಶೇಕಡ 60ರಷ್ಟು ಕಡಿತ ನೀಡಲಾಗುತ್ತಿದ್ದು, ಶೋ ರೂಂ ಉದ್ಘಾಟನೆಯ ಕೊಡುಗೆಯಾಗಿ ಜು. 31 ರವರೆಗೆ ಎಲ್ಲಾ ಬಿಲ್‌ಗಳ ಮೇಲೆ ಶೇ. 5ರಷ್ಟು ರಿಯಾಯಿತಿಯನ್ನೂ ನೀಡಲಾಗುತ್ತಿದೆ. ಇಲ್ಲಿ ಲಿವಿಂಗ್ ರೂಮ್, ಬೆಡ್ ರೂಮ್, ಡೈನಿಂಗ್ ರೂಮ್ ಮತ್ತು ವಾರ್ಡ್‌ರೋಬ್ ವರ್ಗದ ಫರ್ನಿಚರ್ ಶ್ರೇಣಿಯ ಜೊತೆಗೆ ಗೃಹಲಂಕಾರ ಬಳಕೆಯ ವ್ಯಾಪಕ ಶ್ರೇಣಿಯ ಫರ್ನಿಚರ್ ಕೂಡ ಲಭ್ಯವಿದೆ. ಅಕ್ಸೆಸರಿಗಳ ಶ್ರೇಣಿಯು ಮೊಂಬತ್ತಿ, ಗಡಿಯಾರ, ಪೇಯಿಂಟಿಂಗ್, ಪಿಕ್ಚರ್ ಫ್ರೇಮ್, ಅಲಂಕಾರಿಕ ಹೂವು, ಕುಂಡ ಮತ್ತು ವಾಸ್, ಕಟ್ಲರಿ ಮತ್ತು ವೈನ್ ಗ್ಲಾಸ್, ಕಿಚನ್ ವೇರ್, ಲ್ಯಾಂಪ್, ದಿಂಬು, ಅಪ್‌ಹೋಲ್‌ಸ್ಟ್ರಿ, ಕರ್ಟ್‌ನ್ ಮತ್ತು ಎಲ್ಲಾ ರೀತಿಯ ಸ್ಟೈಲ್ ಹಾಗೂ ಸೂಕ್ಷ್ಮಾಭಿರುಚಿಯ ವಸ್ತುಗಳನ್ನು ಒಳಗೊಳ್ಳುತ್ತದೆ ಎಂದು ಹೇಳಿದರು.
ಸಂಸ್ಥೆಯ ಪ್ರಾದೇಶಿಕ ವ್ಯವಸ್ಥಾಪಕ ಮೊಹಮ್ಮದ್ ಮನ್ಸೂರ್ ಮಾತನಾಡಿ, ನೀಲಕಮಲ್ @ homeನಲ್ಲಿ ಉತ್ಕೃಷ್ಟ ದರ್ಜೆಯ ಪರಿಕರಗಳು ದೊರೆಯುವುದರಲ್ಲದೇ, ವಿವಿಧ ಸೇವೆಗಳನ್ನು ಒದಗಿಸಲಾಗುತ್ತಿದೆ. ಗ್ರಾಹಕರು ಯಾವ ಉತ್ಪನ್ನವನ್ನು ಕೊಳ್ಳಬೇಕು ಎಂಬ ಬಗ್ಗೆ ದಕ್ಷ ಮಾರ್ಗದರ್ಶನ, ಸಾಲದ ಸೌಲಭ್ಯದ ವಿವರ, ಸುರಕ್ಷಿತವಾಗಿ ಕೊಡ ಪರಿಕರವನ್ನು ಮನೆಗೆ ಕೊಂಡೊಯ್ಯಲು ವ್ಯವಸ್ಥೆ, ಮುಂತಾದ ಸೇವೆಗಳನ್ನು ನೀಡಲಾಗುತ್ತಿದೆ ಎಂದರು. ಮತ್ತೊಬ್ಬ ಅಧಿಕಾರಿ ಪ್ರೇಮ್ ಕಿಶೋರಿ, ಹಲವಾರು ಗಣ್ಯ ಗ್ರಾಹಕರು ಉಪಸ್ಥಿತರಿದ್ದರು.