ಜಮೀನಿನಲ್ಲಿ ಹೆಬ್ಬಾವು ಪತ್ತೆ

SRP_31-01jpj
ದೊಡ್ಡಪಾಳ್ಯ ಗ್ರಾಮ ಹೊರವಲಯದ ಕೃಷಿ ಜಮೀನಿನಲ್ಲಿ ಸೆರೆ ಹಿಡಿದ ಬೃಹತ್ ಗಾತ್ರ ಹಾಗೂ 11 ಅಡಿ ಉದ್ದದ ಹೆಣ್ಣು ಹೆಬ್ಬಾವನ್ನು ಉರಗ ತಜ್ಞ ಸ್ನೇಕ್ ಸುಲ್ತಾನ್ ಗೌಸ್ ಸ್ನೇಹಿತರೊಂದಿಗೆ ಪ್ರದರ್ಶಿಸಿದರು.
Published on

ಶ್ರೀರಂಗಪಟ್ಟಣ: ತಾಲೂಕಿನ ದೊಡ್ಡಪಾಳ್ಯ ಗ್ರಾಮ ಹೊರವಲಯದ ಸರ್ಕಾರಿ ಪ್ರಾಥಮಿಕ ಶಾಲಾ ಹಿಂಭಾಗದ ಕೃಷಿ ಜಮೀನಿನಲ್ಲಿ ಶನಿವಾರ ಭಾರಿ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಉರಗ ತಜ್ಞ ಸ್ನೇಕ್ ಸುಲ್ತಾನ್ ಗೌಸ್ ಸುರಕ್ಷಿತವಾಗಿ ಸೆರೆ ಹಿಡಿದಿದ್ದಾರೆ.
ಸುಮಾರು 8 ವರ್ಷ, 11 ಅಡಿ ಉದ್ದವಿರುವ ಈ ಭಾರಿ ಗಾತ್ರದ ಹೆಣ್ಣು ಹೆಬ್ಬಾವು ಬರೋಬ್ಬರಿ 40 ಕೆ.ಜಿ ತೂಕವಿದ್ದು, ಕಾವೇರಿ ನದಿ ತೀರದಲ್ಲಿ ನೀರುನಾಯಿಯನ್ನು ನುಂಗಿ ಬಳಿಕ ನದಿ ತೀರದ ಕಬ್ಬಿನ ಗದ್ದೆಯೊಳಗೆ ಅಡಗಿಕೊಂಡಿತ್ತು. ಇದನ್ನು ಕಂಡ ಸ್ಥಳೀಯರು ತಕ್ಷಣ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಸ್ನೇಕ್ ಸುಲ್ತಾನ್ ಗೌಸ್ ಹೆಬ್ಬಾವನ್ನು ಸುರಕ್ಷಿತವಾಗಿ ಪ್ಲಾಸ್ಟಿಕ್ ಚೀಲದಲ್ಲಿ ಸೆರೆ ಹಿಡಿದಿದ್ದು, ಇದೀಗ ಬಂಡೀಪುರ ಅರಣ್ಯಕ್ಕೆ ಕೊಂಡೊಯ್ಯುವುದಾಗಿ ತಿಳಿಸಿದ್ದಾರೆ.

ಸ್ಥಳದಲ್ಲಿ ಚಿತ್ರಕಲಾ ಶಿಕ್ಷಕ ಅಭಿಲಾಷ್, ಆಟೋ ಇಂತೂ, ಪಾಲಹಳ್ಳಿ ಬಸವರಾಜ್ ಸೇರಿದಂತೆ ಹಲವರು ನೆರೆದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net