ಇಂದು ಪುನೀತ್​ ಪುಣ್ಯಸ್ಮರಣೆ: ನೋವಿನಲ್ಲೇ ಅಪ್ಪು ಸಮಾಧಿ ಸುತ್ತ ಪ್ರದಕ್ಷಿಣೆ ಹಾಕಿದ ಪತ್ನಿ ಅಶ್ವಿನಿ

puneeth rajkumar (6)
Published on

ಬೆಂಗಳೂರು: ನಟ ಪುನೀತ್ ರಾಜ್​ಕುಮಾರ್​ ಅವರು ನಮ್ಮನ್ನೆಲ್ಲ ಅಗಲಿ ಇಂದಿಗೆ 11 ದಿನ. ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಸಮಾಧಿ ಬಳಿ 11ನೇ ದಿನ ಕಾರ್ಯ ನೆರವೇರಿಸಲು ಪುನೀತ್​ ಕುಟುಂಬಸ್ಥರು ಆಗಮಿಸಿದ್ದು, ಶಾಸ್ತ್ರೋಕ್ತವಾಗಿ ಕಾರ್ಯ ಮಾಡುತ್ತಿದ್ದಾರೆ.

ಪುನೀತ್​ರ ಪತ್ನಿ ಅಶ್ವಿನಿ, ಮಕ್ಕಳಾದ ಧೃತಿ, ವಂದಿತಾ, ಸಹೋದರರಾದ ಶಿವರಾಜ್​ಕುಮಾರರ್, ರಾಘವೇಂದ್ರ ರಾಜ್​ಕುಮಾರ್​ ಸೇರಿದಂತೆ ಕುಟುಂಬ ಸದಸ್ಯರು ಅಪ್ಪು ಸಮಾಧಿ ಬಳಿ ಆಗಮಿಸಿ ಪೂಜೆ ಮಾಡುತ್ತಿದ್ದಾರೆ. ಪುನೀತ್​ರ ಪತ್ನಿ ಅಶ್ವಿನಿ ನೋವಿನಲ್ಲೇ ಪುನೀತ್​ರ ಸಮಾಧಿ ಸುತ್ತ ಪ್ರದಕ್ಷಿಣೆ ಹಾಕಿ ಕಣ್ಣೀರು ಹಾಕಿದರು.

ಅಪ್ಪು ಸಮಾಧಿಯನ್ನ ಹೂವಿನಿಂದ ಅಲಂಕರಿಸಲಾಗಿದೆ. ಅಪ್ಪು ಅವರಿಗೆ ಇಷ್ಟವಾದ ತಿಂಡಿ ತಿನಿಸುಗಳನ್ನು ಎಡೆಗೆ ಇಡಲಾಗಿದೆ. 11ನೇ ದಿನದ ಕಾರ್ಯದಲ್ಲಿ ಅಪ್ಪು ಕುಟುಂಬಸ್ಥರು ಮತ್ತು ಆಪ್ತರಿಗಷ್ಟೇ ಪಾಲ್ಗೊಳ್ಳಲು ಅವಕಾಶವಿದ್ದು, ಮಧ್ಯಾಹ್ನ 12ರ ವರೆಗೆ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. 12 ಗಂಟೆ ಬಳಿಕ ಸಾರ್ವಜನಿಕರು ಅಪ್ಪು ಸಮಾಧಿ ಬಳಿ ಬರಲು ಅವಕಾಶ ನೀಡಲಾಗುತ್ತೆ. ನಾಳೆ(ಮಂಗಳವಾರ) ಸಾರ್ವಜನಿಕರಗೆ ಅನ್ನಸಂತರ್ಪಣೆ ಕಾರ್ಯ ನಡೆಯಲಿದೆ. ನಿನ್ನೆ-ಮೊನ್ನೆಯಿಂದಲೇ ರಾಜ್ಯಾದ್ಯಂತ ಅಪ್ಪು ಅಭಿಮಾನಿಗಳು ಅನ್ನಸಂತರ್ಪಣೆ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net