PSI ಪರೀಕ್ಷೆ ಅಕ್ರಮ: ಕರ್ನಾಟಕ ಮೀಸಲು ಪೊಲೀಸ್​ ಪಡೆಯ ಡಿವೈಎಸ್​ಪಿ ವೈಜನಾಥ ಅಮಾನತು

psi exam scam case dysp vaijanath
Published on

ಕಲಬುರಗಿ: ಪಿಎಸ್​ಐ ಹುದ್ದೆಗಳ ಪರೀಕ್ಷೆಯಲ್ಲಿನ ಅಕ್ರಮ ಪ್ರಕರಣ ಸಂಬಂಧ ಇಲ್ಲಿನ ಕೆಎಸ್​ಆರ್​ಪಿ ಸಹಾಯಕ ಕಮಾಂಡೆಂಟ್ (ಡಿವೈಎಸ್ಪಿ) ವೈಜನಾಥ ರೇವೂರ ಅವರನ್ನು ಕೆಲಸದಿಂದ ಅಮಾನತು ಮಾಡಲಾಗಿದೆ.

ಪಿಎಸ್​ಐ ಹುದ್ದೆ ಹಗರಣ ಕೇಸ್​ನಲ್ಲಿ ಸಿಐಡಿ ಅಧಿಕಾರಿಗಳು ವೈಜನಾಥ ರೇವೂರ ಅವರನ್ನು ಮೇ 6ರಂದು ಬಂಧಿಸಿದ್ದಾರೆ. ಕಳೆದ ಆರು ದಿನಗಳಿಂದ ಸಿಐಡಿ ಕಸ್ಟಡಿಯಲ್ಲೇ ವೈಜನಾಥ ಇದ್ದಾರೆ. ಅಕ್ರಮದ ಕಿಂಗ್​ಪಿನ್ ಆರ್.ಡಿ.ಪಾಟೀಲ್ ಜತೆಗೆ ವೈಜನಾಥ ಆಪ್ತರಾಗಿ ಗುರುತಿಸಿಕೊಂಡಿದ್ದರು. ಹಲವು ಅಭ್ಯರ್ಥಿಗಳ ಡೀಲ್ ಕುದುರಿಸಿದ್ದರು ಎಂಬ ಆರೋಪ ಇದೆ. ವೈಜನಾಥ ಅವರನ್ನು ಅಮಾನತು ಮಾಡಿ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net