ಕಾಡು ಹಂದಿಗಳ ಕಾಟಕ್ಕೆ ನಲುಗಿದ ಅಡಕೆ ತೋಟ

SDP ARECA LOSS
Published on

ಸಿದ್ದಾಪುರ: ತಾಲೂಕಿನ ಇಟಗಿ ಗ್ರಾಪಂ ವ್ಯಾಪ್ತಿಯ ಹರಗಿಯ ಶಾರದಾ ಗಣಪತಿ ನಾಯ್ಕ ಎಂಬುವವರ ಅಡಕೆ ತೋಟಕ್ಕೆ ಕಾಡು ಹಂದಿಗಳು ದಾಳಿ ನಡೆಸಿ 125ಕ್ಕೂ ಹೆಚ್ಚು ಅಡಕೆ ಸಸಿಗಳನ್ನು ನಾಶಪಡಿಸಿದೆ.

ಕಷ್ಟ ಪಟ್ಟು ಅಡಕೆ ಸಸಿಗಳನ್ನು ನೆಟ್ಟಿದ್ದ ಶಾರದಾ ಅವರು, ಕಾಡುಪ್ರಾಣಿಗಳ ಕಾಟ ತಪ್ಪಿಸಲು ಮುಂಜಾಗ್ರತೆ ವ್ಯವಸ್ಥೆಯನ್ನೂ ಮಾಡಿಕೊಂಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಬೆಳೆಯ ರಕ್ಷಣೆಯಾಗುತ್ತಿಲ್ಲ. ಈ ಕುರಿತು ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ನೀಡುವುದರ ಜತೆಗೆ ಕಾಡುಪ್ರಾಣಿಗಳು ಗದ್ದೆ, ಅಡಕೆ ತೋಟಕ್ಕೆ ದಾಳಿ ನಡೆಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೃಷಿಕ ಹರೀಶ ನಾಯ್ಕ ಆಗ್ರಹಿಸಿದ್ದಾರೆ.

ತಾಲೂಕಿನ ಇಟಗಿ, ಬಿಳಗಿ, ಹಾರ್ಸಿಕಟ್ಟಾ, ಕ್ಯಾದಗಿ, ದೊಡ್ಮನೆ, ಬಿದ್ರಕಾನ ಮತ್ತಿತರ ಗ್ರಾಪಂ ವ್ಯಾಪ್ತಿಯ ರೈತರ ಅಡಕೆ ತೋಟಕ್ಕೆ ಮಂಗಗಳು, ಕಾಡುಹಂದಿಗಳು ಹಾಗೂ ಕಾಡುಕೋಣಗಳ ಕಾಟ ವಿಪರೀತವಾಗುತ್ತಿದೆ. ಇವುಗಳ ಹಾವಳಿಯಿಂದ ಅಡಕೆ ಸಸಿ, ಗಿಡ, ಬಾಳೆ ಗಿಡಗಳು ಹಾಗೂ ಇತರೆ ಬೆಳೆಗಳನ್ನು ಕಾಪಾಡಿಕೊಳ್ಳುವುದು ಒಂದು ಸವಾಲಾಗಿದೆ ಎನ್ನುತ್ತಾರೆ ಬೆಳೆಗಾರರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net