

ಮುಂಡಗೋಡ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆಯಡಿ ಎರಡು ವರ್ಷದಲ್ಲಿ 500 ಕೋಟಿ ಟಿಕೆಟ್ಗಳು ವಿತರಿಸಲ್ಪಟ್ಟಿಸುವುದು ಸಂತಸದ ಸಂಗತಿಯಾಗಿದೆ ಎಂದು ಮಾಜಿ ಶಾಸಕ ವಿ.ಎಸ್. ಪಾಟೀಲ ಹೇಳಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ರಾಜ್ಯ ಸರ್ಕಾರ ಶಕ್ತಿ ಯೋಜನೆಯಡಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೊಟ್ಟ ಮಾತಿನಂತೆ ನಡೆದುಕೊಂಡಿರುವ ಕಾಂಗ್ರೆಸ್ ಸರ್ಕಾರ, ಗ್ಯಾರಂಟಿ ಯೋಜನೆಗಳನ್ನೂ ಇನ್ನೂ ಮೂರು ವರ್ಷಗಳ ಕಾಲ ಮುಂದುವರಿಸಲಿದೆ ಎಂದರು.
ಗ್ಯಾರಂಟಿ ಯೋಜನೆ ತಾಲೂಕಾಧ್ಯಕ್ಷ ರಾಜಶೇಖರ ಹಿರೇಮಠ ಮಾತನಾಡಿದರು. ಆರಂಭದಲ್ಲಿ ಬಸ್ಗೆ ಪೂಜೆ ಸಲ್ಲಿಸಿ ಸಿಹಿ ಹಂಚಲಾಯಿತು. ತಾಪಂ.ಅಧಿಕಾರಿ ಟಿ.ವೈ. ದಾಸನಕೊಪ್ಪ, ತಹಸೀಲ್ದಾರ್ ಶಂಕರ ಗೌಡಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕೃಷ್ಣ ಹಿರಳ್ಳಿ, ರವಿಗೌಡ ಪಾಟೀಲ, ಜಯಸುಧಾ ಭೋವಿ, ಜ್ಞಾನದೇವ ಗುಡಿಯಾಳ, ರಫೀಕ್ ಇನಾಮದಾರ, ಕೆಂಜೋಡಿ ಗಲಬಿ, ಎಚ್.ಎಂ. ನಾಯ್ಕ, ಎಂ.ಎನ್. ದುಂಡಸಿ, ಧರ್ಮರಾಜ ನಡಗೇರಿ, ಶಾರದಾಬಾಯಿ ರಾಠೋಡ, ಗೋಪಾಲ ಪಾಟೀಲ, ವೈ.ಪಿ. ಬುಜಂಗಿ, ಚಂದ್ರಶೇಖರ ಕರಿಗಾರ, ಇತರರಿದ್ದರು.