ಬಾಲಕನ್ಯೆಯರಿಗೆ ಉಡಿ ತುಂಬುವ ಕಾರ್ಯಕ್ರಮ

huligemma devi
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಅರವಿಂದನಗರದ ಶ್ರೀ ಹುಲಿಗೆಮ್ಮಾದೇವಿ ದೇವಸ್ಥಾನದಲ್ಲಿ ದುರ್ಗಾಷ್ಟಮಿ ನಿಮಿತ್ತ ಮಂಗಳವಾರ ನವದುರ್ಗಿ ಬಾಲಕನ್ಯೆಯರಿಗೆ ಉಡಿ ತುಂಬುವ ಕಾರ್ಯಕ್ರಮವನ್ನು ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎಸ್.ವಿ ಪ್ರಸಾದ ಉದ್ಘಾಟಿಸಿದರು.

ಬಾಲಕನ್ಯೆಯರಿಗೆ ಪಾದಪೂಜೆ ಗೈದು, ವಸ್ತ್ರ-ಉಡುಗೆಗಳನ್ನು ತೊಡಿಸಿ, ಉಡಿತುಂಬಿ, ಅವರಿಂದ ಶ್ರೀ ದುರ್ಗಾಹೋಮಕ್ಕೆ ಪೂರ್ಣಾಹುತಿ ಅರ್ಪಿಸಿ ಮುತ್ತೈದೆಯರಿಂದ ಆರತಿ ಮಾಡಿಸಿ ಪೂಜೆ-ಕೈಂಕರ್ಯಗಳನ್ನು ನೆರವೇರಿಸಲಾಯಿತು. ಭಕ್ತರಿಗೆ ಅನ್ನಪ್ರಸಾದ ವಿತರಿಸಲಾಯಿತು.

ಮಾತೋಶ್ರೀ ಡಾ. ಹುಲಿಗೆಮ್ಮಾ ಪೋಸಾ ಅಮ್ಮನವರ ಸಾನ್ನಿಧ್ಯ ವಹಿಸಿದ್ದರು. ಸಮಾಜ ಸೇವಕಿ ಜ್ಯೋತಿ ಪ್ರಲ್ಹಾದ ಜೋಶಿ, ತೋಟಪ್ಪ ನಿಡಗುಂದಿ, ಮಹೇಶ ದಾಬಡೆ, ಕೀರ್ತಪ್ಪಾ ಗೋಟೂರ, ಹನಮಂತಪ್ಪ ಧೂಪದ, ವಿಠ್ಠಲ ಏಕಬೋಟೆ, ರಾಜು ತಾಂಬೆ, ನವೀನ ಮನಗುಂಡಿ, ರಾಜುಗೌಡ ಪಾಟೀಲ, ವಾಗೇಶಗೌಡ ಪಾಟೀಲ, ವಿರುಪಾಕ್ಷ ಚಲವಾದಿ, ಲಕ್ಷ್ಮಣ ವಡ್ಡರ, ವಿನಾಯಕ ಹಿಂಡಿ, ರಾಜಶ್ರೀ ಬಗಲಿ, ಅನಿತಾ ಬಾಣದ, ಅನುಪಮಾ ಅಕ್ಕೂರ, ದೇವಸ್ಥಾನದ ಪ್ರಧಾನ ಅರ್ಚಕ ರವಿಕುಮಾರ ಮಡ್ಡಿ, ಇತರರು ಇದ್ದರು.

ಶ್ರೀ ಗುರು ಬನ್ನಿಕೊಪ್ಪ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net