ಮಕ್ಕಳ ಸಾಧನೆಗೆ ಮಾದರಿಯಾಗುವ ಕಾರ್ಯಕ್ರಮ

ಕುರುಗೋಡು ಸಮೀಪದ ಕೆರೆಕೆರೆಯಲ್ಲಿ ಗುರುವಂದನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಶಿಕ್ಷಕರು ಉದ್ಘಾಟಿಸಿದರು. ಶಿಕ್ಷಕರಾದ ಈಶ್ವರಪ್ಪ, ಪರಮೇಶಪ್ಪ, ತುಳಸಿಬಾಯಿ ಪವಾರ್, ಶೇಖರಪ್ಪ, ವಿಜಯ್ ಕುಮಾರ್, ಪ್ರಮುಖರಾದ ಕುಂದ್ಲಿ ಈಶ್ವರ, ಸಾಳೇರು ನಾಗರಾಜ, ಮಾಯಪ್ಪ, ಮಯೂರ, ಕುಂದ್ಲಿ ಭೀಮರಾಜ, ಕಾಗಿ ಗೋವರ್ಧನ ಇತರರಿದ್ದರು.

Published on

ಕುರುಗೋಡು: ವಿದ್ಯಾರ್ಥಿಗಳನ್ನು ಉನ್ನತ ಸ್ಥಾನದಲ್ಲಿ ಕಂಡಾಗಲೇ ಶಿಕ್ಷಕ ವೃತ್ತಿಗೆ ಸಾರ್ಥಕ್ಯ ಸಿಗಲಿದೆ. ಸಣ್ಣ ಗ್ರಾಮವಾದ ಕೆರೆಕೆರೆಯಲ್ಲಿ 23 ಕ್ಕೂ ಹೆಚ್ಚು ಜನ ಸರ್ಕಾರಿ ನೌಕರರಿರುವುದು ಸಂತಸದ ಸಂಗತಿ ಎಂದು ನಿವೃತ್ತ ಶಿಕ್ಷಕ ಈಶ್ವರಪ್ಪ ಹೇಳಿದರು.

ಕೆರೆಕೆರೆಯಲ್ಲಿ ಮಾರೆಮ್ಮ ಹಾಗೂ ಸುಂಕ್ಲಮ್ಮ ದೇವಿ ಕುಂಭೋತ್ಸವದ ನಿಮಿತ್ತ ತಾಳೂರು ಹನುಮಂತಪ್ಪ ಗೆಳೆಯರ ಬಳಗದಿಂದ ಗುರುವಾರ ಆಯೋಜಿಸಿದ್ದ ಗುರುವಂದನಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು. ಗ್ರಾಮೀಣ ಭಾಗದ ಮಕ್ಕಳ ಸಾಧನೆಗೆ ಮಾದರಿಯಾಗುವ ಕಾರ್ಯಕ್ರಮ ರೂಪಿಸಿರುವುದು ಶ್ಲಾಘನೀಯ ಎಂದರು.

ಶಿಕ್ಷಕ ಗವಿಸಿದ್ದಪ್ಪ ಅಲ್ಲಾನಗರ ಮಾತನಾಡಿ, ಗ್ರಾಮದ ಆಸ್ತಿಯಾದ ಸರ್ಕಾರಿ ಶಾಲೆಯನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಮಕ್ಕಳು ದುಶ್ಚಟಗಳಿಗೆ ದಾಸರಾಗದೆ ಕಲಿಕೆ ಕಡೆ ಗಮನಹರಿಸಿ ನಾಡಿಗೆ ಕೀರ್ತಿ ತರಬೇಕು ಎಂದು ತಿಳಿಸಿದರು. ಶಿಕ್ಷಕರಾದ ಈಶ್ವರಪ್ಪ, ಪರಮೇಶಪ್ಪ, ತುಳಸಿಬಾಯಿ ಪವಾರ್, ಶೇಖರಪ್ಪ, ವಿಜಯ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಪ್ರಮುಖರಾದ ಕುಂದ್ಲಿ ಈಶ್ವರ, ಸಾಳೇರು ನಾಗರಾಜ, ಮಾಯಪ್ಪ, ಮಯೂರ, ಕುಂದ್ಲಿ ಭೀಮರಾಜ, ಕಾಗಿ ಗೋವರ್ಧನ, ಬಿಂಗಿ ಜಯಪ್ಪ, ಗೆಳೆಯರ ಬಳಗದ ಜಡೆಪ್ಪ, ಮಾರೆಣ್ಣ, ಮಾರುತಿ, ವಿ.ಶಂಕ್ರಪ್ಪ, ಮಾರೆಪ್ಪ, ಯುವರಾಜ, ವೈ.ದ್ಯಾವಣ್ಣ, ಎಸ್.ನಾಗರಾಜ, ಟಿ.ಹೊನ್ನೂರಸ್ವಾಮಿ, ವೀರಮಲ್ಲ, ಪಾಂಡುರಂಗ, ಮಂಜುನಾಥ, ಎಚ್.ಎನ್.ಹೊನ್ನೂರ, ಬಿ.ಮಂಜು, ಟಿ.ಮಾರೇಶ, ಬಿ.ಮಾರುತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net