

ಬನ್ನೂರು: ಸಾಂಸ್ಕೃತಿಕ ಕುಟುಂಬ ವೈಭವದ ಕಾರ್ಯಕ್ರಮಗಳು ಮಕ್ಕಳಿಗೆ ಉತ್ತಮ ವೇದಿಕೆ ಕಲ್ಪಿಸಿಕೊಡುತ್ತದೆ ಎಂದು ಮೈಸೂರು ದಕ್ಷಿಣ ವಿಭಾಗದ ಸಂಪನ್ಮೂಲ ವ್ಯಕ್ತಿ ಡಾ.ಬಿ.ಸಿ.ವಿಜಯಕುಮಾರ್ ತಿಳಿಸಿದರು.
ಪಟ್ಟಣದ ಸಮೀಪದ ಜಿಪಿಪಿ ಪಬ್ಲಿಕ್ ಸ್ಕೂಲ್ ವತಿಯಿಂದ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ ಸಾಂಸ್ಕೃತಿಕ ಕುಟುಂಬ ವೈಭವ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದು ಬಹುತೇಕರು ಶಿಕ್ಷಣಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡುವ ನಿಟ್ಟಿನಲ್ಲಿ, ನಮ್ಮ ಸಂಸ್ಕೃತಿಯ ಆಚಾರ ವಿಚಾರಗಳ ಬಗ್ಗೆ ಹಿನ್ನಡೆಯಾಗುತ್ತಿದ್ದು, ಅದನ್ನು ಈ ಶಾಲೆ ವೇದಿಕೆಯ ಮೂಲಕ ತಿಳಿಸುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಮಕ್ಕಳು ಕಲಿಕೆಯ ಜತೆಗೆ ವಿವಿಧ ಚಟುವಟಿಕೆಯಲ್ಲಿ ಪಾಲ್ಗೊಂಡರೆ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಶಿಕ್ಷಣಕ್ಕೆ ಮಹತ್ವ ನೀಡಿದಂತೆ ಕ್ರೀಡೆ, ವೇದಿಕೆ ಕಾರ್ಯಕ್ರಮ, ಪ್ರಬಂಧ ಪಠಣದಂತ ಕಾರ್ಯಕ್ರಮಗಳಿಗೂ ಶಾಲೆ ಸಮಯ ಮೀಸಲಿಡುವುದರಿಂದ ವಿದ್ಯಾರ್ಥಿಗಳು ಎಲ್ಲ ರಂಗದಲ್ಲೂ ತಮ್ಮನ್ನು ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಶಾಲೆ ಸಂಸ್ಥಾಪಕ ಕಾರ್ಯದರ್ಶಿ ಜಿ.ಪಿ ಪ್ರಸನ್ನ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಬೇಕು ಎನ್ನುವಂತ ಮಹತ್ವಪೂರ್ಣ ಉದ್ದೇಶದಿಂದ ಗ್ರಾಮದಲ್ಲಿ ಶಾಲೆಯನ್ನು ಪ್ರಾರಂಭಿಸಿ ಉತ್ತಮ ಶಿಕ್ಷಣ ನೀಡಲಾಗುತ್ತಿದೆ ಎಂದು ತಿಳಿಸಿದರು.
ಮಕ್ಕಳ ಅಭಿವೃದ್ದಿಯೇ ನಮ್ಮ ಗುರಿಯಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಗೆ ಇಲ್ಲಿ ತರಬೇತಿ ನೀಡಿ ಮಕ್ಕಳನ್ನು ಸಜ್ಜುಗೊಳಿಸಲಾಗುತ್ತಿದೆ ಎಂದರು.
ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಗೂಳೇಗೌಡ, ಮಂಚುಗೌಡ, ಸಂಸ್ಥಾಪಕ ಕಾರ್ಯದರ್ಶಿ ಜಿ.ಪಿ ಪ್ರಸನ್ನ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹೇಶ್, ಡಾ.ಚಂದನಾ, ಡಾ.ಸುಷ್ಮಾ, ಕೆಂಪೇಗೌಡ, ಜಿ.ಪಿ ಪ್ರತಾಪ್, ಗೀತಾ, ರಶ್ಮಿ, ಮುಖ್ಯಶಿಕ್ಷಕಿಯರಾದ ಮೋಹತಿನ್‌ತಾಜ್, ಶ್ವೇತಾ ಸೇರಿದಂತೆ ಶಾಲೆಯ ಶಿಕ್ಷಕ ವೃಂದದವರು ವಿದ್ಯಾರ್ಥಿಗಳು ಹಲವರು ಉಪಸ್ಥಿತರಿದ್ದರು.
ಬನ್ನೂರಿನ ಸಮೀಪದ ಜಿಪಿಪಿ ಪಬ್ಲಿಕ್ ಸ್ಕೂಲ್ ವತಿಯಿಂದ ಸಾಂಸ್ಕೃತಿಕ ಕುಟುಂಬ ವೈಭವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಡಾ.ಬಿ.ಸಿ.ವಿಜಯಕುಮಾರ್, ಗೂಳೇಗೌಡ, ಮಂಚುಗೌಡ, ಜಿ.ಪಿ ಪ್ರಸನ್ನ, ಮಹೇಶ್, ಡಾ.ಚಂದನಾ, ಡಾ.ಸುಷ್ಮಾ, ಕೆಂಪೇಗೌಡ, ಜಿ.ಪಿ ಪ್ರತಾಪ್, ಗೀತಾ, ರಶ್ಮಿ, ಮೋಹತಿನ್‌ತಾಜ್, ಶ್ವೇತಾ ಉಪಸ್ಥಿತರಿದ್ದರು.