ಒಂದು ದೀಪ ಹಿಂದು ರಾಷ್ಟ್ರಕ್ಕಾಗಿ ಕಾರ್ಯಕ್ರಮ

16SPT03
ಸೋಮವಾರಪೇಟೆ ಹೊನ್ನಮ್ಮನ ಕೆರೆಯಲ್ಲಿ ಹಿಂದು ಜನಜಾಗೃತಿ ಸಮಿತಿ ವತಿಯಿಂದ ಕಾರ್ತಿಕ ಹುಣ್ಣಿಮೆ ಅಂಗವಾಗಿ ದೀಪ ಬೆಳಗಿಸಲಾಯಿತು.
Published on

ಸೋಮವಾರಪೇಟೆ: ಹಿಂದು ಜನಜಾಗೃತಿ ಸಮಿತಿ ವತಿಯಿಂದ ಕಾರ್ತಿಕ ಮಾಸದ ಹುಣ್ಣಿಮೆ ಅಂಗವಾಗಿ ಸಮೀಪದ ಹೊನ್ನಮ್ಮನ ಕೆರೆ ದೇವಾಲಯದಲ್ಲಿ ಒಂದು ದೀಪ ಹಿಂದು ರಾಷ್ಟ್ರಕ್ಕಾಗಿ ಕಾರ್ಯಕ್ರಮ ಶುಕ್ರವಾರ ರಾತ್ರಿ ಏರ್ಪಡಿಸಲಾಗಿತ್ತು.

ಸಮಿತಿ ಪದಾಧಿಕಾರಿ ಪ್ರದೀಪ್ ಕುಮಾರ್ ಮಾತನಾಡಿ, ಈ ಕಾರ್ಯಕ್ರಮದ ಪ್ರಯುಕ್ತ ದೇವಸ್ಥಾನ ಮತ್ತು ಮನೆಗಳಲ್ಲಿ ದೀಪವನ್ನು ಬೆಳಗಿಸಲಾಗುತ್ತದೆ. ದೇಶಾದ್ಯಂತ ದೇವಸ್ಥಾನಗಳಲ್ಲಿ ಸಾಲು ದೀಪಗಳನ್ನು ಬೆಳಗಿಸಲಾಯಿತು. ಹಿಂದು ರಾಷ್ಟ್ರದ ಸಂಕಲ್ಪವನ್ನು ಹಿಂದುಗಳು ಮಾಡಬೇಕು ಎಂದು ಹೇಳಿದರು. ಸಮಿತಿ ಸದಸ್ಯರಾದ ಸತೀಶ್, ಪಿ.ಮಧು, ಮಂಜುನಾಥ ಆಚಾರ್ಯ, ವೀರಯ್ಯ ಹಿರೇವ್ಮಠ್, ಬಿ.ಎಚ್. ಹರೀಶ್, ಉದಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net