

ಬೆಂಗಳೂರು: ಮಂಗಳೂರು ಮತ್ತು ಗೋವಾ ವಿಶ್ವವಿದ್ಯಾಲಯಗಳ ವಿಶ್ರಾಂತ ಕುಲಪತಿ, ಇತಿಹಾಸ ತಜ್ಞ, ಶಿಕ್ಷಣ ತಜ್ಞ ಪ್ರೊ.ಬಿ.ಷೇಕ್ ಅಲಿ ಅವರು ಗುರುವಾರ ನಿಧನರಾದರು.
ಹಾಸನ ಜಿಲ್ಲೆಯ ಬೆಳಗೋಡು ಮೂಲದ ಪ್ರೊ.ಷೇಕ್ ಅಲಿ ಅವರು ಮೈಸೂರಿನ ಸರಸ್ವತಿಪುರಂನಲ್ಲಿ ವಾಸವಿದ್ದರು. ಇವರಿಗೆ 98 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಇವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಕೊನೆಯುಸಿರೆಳೆದರು.
ಮೈಸೂರು ವಿಶ್ವವಿದ್ಯಾಲಯದಲ್ಲಿ ಆನರ್ಸ್ ಪದವಿ ಹಾಗೂ ಆಲಿಘರ್ ಮುಸ್ಲಿಂ ವಿವಿಯಿಂದ ಪಿಎಚ್‌ಡಿ ಪಡೆದಿದ್ದರು. ಮೈಸೂರು ವಿವಿಯಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಇವರು ಉರ್ದು, ಇಂಗ್ಲಿಷ್, ಫ್ರೆಂಚ್ ಭಾಷೆ ಮೇಲೆ ಹಿಡಿತ ಸಾಧಿಸಿದ್ದರು. ಕನ್ನಡ ವಿವಿ ಪ್ರಕಟಿಸಿರುವ 'ಕರ್ನಾಟಕ ಇತಿಹಾಸದ ಏಳು ಸಂಪುಟಗಳು’ ಪ್ರಧಾನ ಸಂಪಾದಕರಾಗಿದ್ದರು.
ಇವರಿಗೆ ಮೈಸೂರು ವಿಶ್ವವಿದ್ಯಾಲಯದಿಂದ 'ಸುವರ್ಣ ಮಹೋತ್ಸವ ಪ್ರಶಸ್ತಿ', 'ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ' ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ. ಪ್ರೊ.ಷೇಕ್ ಅಲಿ ಅವರ ನಿಧನಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿಂದತೆ ಹಲವು ಅಂತಾಪ ಸೂಚಿಸಿದ್ದಾರೆ.