ನಾರಿ ನಿನಗೊಂದು ಸ್ಯಾರಿ ವಿಜೇತರಿಗೆ ಬಹುಮಾನ

Untitled-1
ವಿಜಯವಾಣಿ ಆಯೋಜನೆ ಮಾಡಿದ್ದ ನಾರಿ ನಿನಗೊಂದು ಸ್ಯಾರಿ ಲಕ್ಕಿ ಡ್ರಾ ವಿಜೇತರಾದ ಐವರಿಗೆ ಮಂಗಳವಾರ ಆನೇಕಲ್​ ವಿಜಯವಾಣಿ ಕಚೇರಿಯಲ್ಲಿ ಬಹುಮಾನ ವಿತರಣೆ ಮಾಡಲಾಯಿತು. ವರದಿಗಾರ ನವೀನ್​ ಚಂದ್ರ ಶೆಟ್ಟಿ, ಪ್ರಸರಣ ವಿಭಾಗದ ಮಹೇಶ್​, ಸುಮಂತ್​, ವೆಂಕಟೇಶ್​, ವೆಂಕಿ, ಪ್ರಜ್ವಲ್​, ದಿಲೀಪ್​, ರಾಜು ಇದ್ದರು.
Published on

ಆನೇಕಲ್​ : ರಾಜ್ಯದ ನಂಬರ್​&1 ದಿನಪತ್ರಿಕೆ ವಿಜಯವಾಣಿ ಓದುಗರ ದ್ವನಿಯಾಗಿ ಆಯೋಜನೆ ಮಾಡಿದ್ದ ನಾರಿ ನಿನಗೊಂದು ಸ್ಯಾರಿ ಲಕ್ಕಿ ಡ್ರಾ ವಿಜೇತರಾದ ಐವರಿಗೆ ಮಂಗಳವಾರ ಪಟ್ಟಣದ ವಿಜಯವಾಣಿ ಕಚೇರಿಯಲ್ಲಿ ಬಹುಮಾನ ವಿತರಣೆ ಮಾಡಲಾಯಿತು.

ಆನೇಕಲ್​ನ ಉಪಕಾರ್​ ಬಡಾವಣೆಯ ಹಿಂದು ವಿ.ಶೆಟ್ಟಿ, ಪಟ್ಟಣದ ಉದಯ ಕುಮಾರ್​ ರಸ್ತೆಯ ಹೇಮಲತಾ ವೆಂಕಟೇಶ್​, ಭಾಯಸಾಬಿ ಬಡಾವಣೆಯ ವಿದ್ಯಾರ್ಥಿನಿ ಎಸ್​.ಅರ್ಚನಾ, ಮಾಯಸಂದ್ರದ ಕೆ.ಎಂ.ಭಾರತಿ, ಸಭ್​ ಮಂಗಲ ಗ್ರಾಮದ ಪ್ರಮೀಳಾ ಸ್ಪಧೆ ವಿಜೇತರು. ಸ್ಪರ್ಧೆ ವಿಜೇತರಾದ ಹೇಮಲತಾ ವೆಂಕಟೇಶ್​ ಮಾತನಾಡಿ, ನಿರಂತರವಾಗಿ ವಿಜಯವಾಣಿ ಪತ್ರಿಕೆ ಓದುತ್ತೇನೆ. ಈ ಬಾರಿ ಸೀರೆ ಗೆದ್ದಿರುವುದು ಸಂತದ ತಂದಿದೆ ಎಂದರು.

ಮಾಯಸಂದ್ರದ ಕೆ.ಎಂ.ಭಾರತಿ ಮಾತನಾಡಿ, ಕಳೆದ ಮೂರು ವರ್ಷದಿಂದ ನಿರಂತರವಾಗಿ ಸೀರೆ ಗೆದ್ದಿದ್ದೇನೆ. ಪ್ರತಿದಿನ ಪತ್ರಿಕೆಯಲ್ಲಿ ಬರುವ ಪ್ರಶ್ನೆಗಳಿಗೆ ಉತ್ತರಿಸಿ. ಅದನ್ನು ಬಾಕ್ಸ್​ನಲ್ಲಿ ಹಾಕಿದ್ದು, ಈಗ ಮೂರನೇ ಬಾರಿಗೆ ಸೀರೆಯನ್ನು ಬಹುಮಾನವಾಗಿ ಪಡೆದಿರುವುದು ಖುಷಿ ತಂದಿದೆ ಎಂದರು. ವಿದ್ಯಾರ್ಥಿನಿ ಎಸ್​ ಅರ್ಚನಾ ಮಾತನಾಡಿ, ಪಠ್ಯ ಪುಸ್ತಕಗಳನ್ನು ಪ್ರತಿದಿನ ಓದುವ ಜತೆಗೆ ಮನೆಗೆ ವಿಜಯವಾಣಿ ಪತ್ರಿಕೆ ತರಿಸುತ್ತೇವೆ, ಪ್ರತಿದಿನ ಪ್ರಶ್ನೆಗಳಿಗೆ ಉತ್ತರಿಸಿ, ಅದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುತ್ತೇವೆ, ಬಹುಮಾನ ಬಂದಿದ್ದು, ಖುಷಿಯಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net