ತುರ್ತು ವೈದ್ಯಕೀಯ ಸೇವೆಗೆ ಆದ್ಯತೆ: 'ಸಿಎಂ ಆರೋಗ್ಯವಾಹಿನಿ' ಘೋಷಣೆ, ಚಿತ್ರದುರ್ಗಕ್ಕೆ ಹೊಸ ವೈದ್ಯಕೀಯ ಕಾಲೇಜು
Published on:
Copied
Follow Us
ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಅವರ ಚೊಚ್ಚಲ ಬಜೆಟ್ನಲ್ಲಿ ಆರೋಗ್ಯ ಕ್ಷೇತ್ರಕ್ಕೂ ಭರಪೂರ ಯೋಜನೆ ಮತ್ತು ತುರ್ತು ವೈದ್ಯಕೀಯ ಸೇವೆಗೆ ಆದ್ಯತೆ ನೀಡಲಾಗಿದೆ.
ಚಿತ್ರದುರ್ಗಕ್ಕೆ ಹೊಸ ವೈದ್ಯಕೀಯ ಕಾಲೇಜು
ಯಾದಗಿರಿ ಜಿಲ್ಲಾ ಆಸ್ಪತ್ರೆಯಲ್ಲಿ ಆಯುಷ್ ಕೇಂದ್ರ ಸ್ಥಾಪನೆ
ರಾಮನಗರದ ಅರ್ಚಕರ ಹಳ್ಳಿಯಲ್ಲಿ ರಾಜೀವ್ಗಾಂಧಿ ಆರೋಗ್ಯ ಕೇಂದ್ರ ಸ್ಥಾಪನೆ
ಬೀದರ್, ಚಾಮರಾಜನಗರ, ಹಾವೇರಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮುಖ್ಯಮಂತ್ರಿ ಆರೋಗ್ಯವಾಹಿನಿ ಘೋಷಣೆ
ಹಾವೇರಿ, ಶಿಗ್ಗಾಂವಿ ಆಸ್ಪತ್ರೆ ಮೇಲ್ದರ್ಜೆಗೆ
ತುರ್ತು ವೈದ್ಯಕೀಯ ಸೇವೆಗೆ ಏರ್ ಆ್ಯಂಬುಲೆನ್ಸ್ ಸೇವೆ
ನೂತನ 100 ಪಶುಚಿಕಿತ್ಸಾಲಯ ಸ್ಥಾಪನೆ
ರಾಜ್ಯದ ಪ್ರಮುಖ ನಗರಗಳಲ್ಲಿ 438 "ನಮ್ಮ ಕ್ಲಿನಿಕ್" ಸ್ಥಾಪನೆ. ಬೆಂಗಳೂರಿನ ಎಲ್ಲ ವಾರ್ಡಗಳಲ್ಲಿ ಸ್ಥಾಪನೆ.
ರಾಜ್ಯದ 75 ತಾಲ್ಲೂಕು ಆಸ್ಪತ್ರೆಗಳನ್ನು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯೊಂದಿಗೆ ಮ್ಯಾಪಿಂಗ್ ಮಾಡಿ ಗ್ರಾಮೀಣ ಜನರಿಗೆ ತಾಲ್ಲೂಕು ಮಟ್ಟದಲ್ಲಿ ಹೃದಯ ಸಂಬಂಧಿ ಚಿಕಿತ್ಸೆ ಒದಗಿಸುವುದು.
ಅಪಘಾತಕ್ಕೊಳಗಾದ ರೋಗಿಗಳಿಗೆ ಆಸ್ಪತ್ರೆಗೆ ದಾಖಲಾದ 48 ಗಂಟೆಗಳೊಳಗಾಗಿ 76 ಅವಶ್ಯ ಜೀವ ರಕ್ಷಕ ಆರೋಗ್ಯ ಸೇವೆ ಒದಗಿಸುವ ಯೋಜನೆಯನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಪ್ರಾರಂಭ.
50 ಕೋಟಿ ರೂ. ವೆಚ್ಚದಲ್ಲಿ ಬೆಳಗಾವಿಯಲ್ಲಿ ಕಿದ್ವಾಯಿ ಕೇಂದ್ರ
10 ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ಕಿಮೋಥೆರಪಿ ಚಿಕಿತ್ಸೆ