ಕೇಂದ್ರ ಬಿಜೆಪಿ ಸರ್ಕಾರದ ಪೂರ್ವಯೋಜಿತ ಕೃತ್ಯ

3sor1 (1)
ಸೊರಬ ತಾಲೂಕು ಕಚೇರಿ ಎದುರು ಡಿಎಸ್‌ಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಷ್ಟçಪತಿಗಳಿಗೆ ಮನವಿ ಸಲ್ಲಿಸಿದರು. ಬಸವರಾಜ ಹಶ್ವಿ, ಗಂಗಾಮಾಳಮ್ಮ, ರಶೀದ್ ಸಾಬ್, ಪರಶುರಾಮ ಮೂಗೂರು, ಗುತ್ಯಪ್ಪ ತಾಳಗುಪ್ಪ, ಸುಧಾ ಮೂಗೂರು ಇತರರಿದ್ದರು.
Published on

ಸೊರಬ: ಕೆಲವು ತಿಂಗಳಿನಿAದ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ, ದೌರ್ಜನ್ಯ ಹಾಗೂ ಭದ್ರತಾ ಪಡೆಯಿಂದಲೇ ನಡೆಯುತ್ತಿರುವ ದಬ್ಬಾಳಿಕೆ ಖಂಡನೀಯ. ಇದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನಡೆಸುತ್ತಿರುವ ಪೂರ್ವಯೋಜಿತ ಕೃತ್ಯವಾಗಿದೆ. ಕೂಡಲೆ ಆರೋಪಿಗಳನ್ನು ಬಂಽಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ಬಸವರಾಜ ಹಶ್ವಿ ಹೇಳಿದರು.

ಗುರುವಾರ ಪಟ್ಟಣದ ತಾಲೂಕು ಕಚೇರಿ ಎದುರು ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ, ದೌರ್ಜನ್ಯ ಹಾಗೂ ಮಹಿಳೆಯರ ಮೇಲಿನ ಅತ್ಯಾಚಾರ ಖಂಡಿಸಿ ಪ್ರತಿಭಟನೆ ನಡೆಸಿ ಮಾತನಾಡಿ, ಜನಾಂಗೀಯ ಸಂಘರ್ಷ ಮತ್ತು ಹಿಂಸಾಚಾರದಿAದ ನಲುಗಿರುವ ಮಣಿಪುರದಲ್ಲಿ ಕಾನೂನು, ಸುವ್ಯವಸ್ಥೆ ಕಾಪಾಡಲು ವಿಫಲರಾದ ಅಲ್ಲಿನ ಸಿಎಂ ಬೀರನ್ ಸಿಂಗ್ ಸರ್ಕಾರವನ್ನು ಕೂಡಲೆ ವಜಾಗೊಳಿಸಿ ರಾಷ್ಟçಪತಿ ಆಡಳಿತ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಸಂಘಟನೆಯ ತಾಲೂಕು ಸಂಘಟನಾ ಸಂಚಾಲಕ ದಿನೇಶ್ ಹಣಜಿ ಮಾತನಾಡಿ, ಮಣಿಪುರದಲ್ಲಿ ಕುಕಿ ಬುಡಕಟ್ಟು ಸಮುದಾಯದ ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿದ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಇಂತಹ ಘಟನೆಗಳಿಂದ ಸಮಾಜ ತಲೆತಗ್ಗಿಸುವಂತಾಗಿದೆ ಎಂದು ಆರೋಪಿಸಿದರು.
ನಂತರ ತಹಸೀಲ್ದಾರ್ ಹುಸೇನ್ ಸರಕಾವಸ್ ಅವರ ಮೂಲಕ ರಾಷ್ಟçಪತಿಗಳಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಡಿಎಸ್‌ಎಸ್ ಜಿಲ್ಲಾ ಮಹಿಳಾ ಸಂಚಾಲಕಿ ಗಂಗಾಮಾಳಮ್ಮ, ತಾಲೂಕು ಗೌರವ ಸಲಹೆಗಾರ ರಶೀದ್ ಸಾಬ್, ಪ್ರಮುಖರಾದ ಪರಶುರಾಮ ಮೂಗೂರು, ಗುತ್ಯಪ್ಪ ತಾಳಗುಪ್ಪ, ಶೇಖರ್ ಚಿಕ್ಕಶಕುನ, ರಮೇಶ್ ನಲ್ಲಿಕೊಪ್ಪ, ಚಂದ್ರು ಸಮನವಳ್ಳಿ, ಪ್ರದೀಪ ಸಾಬಾರ, ರಮೇಶ್ ಸಮನವಳ್ಳಿ, ಸುಧಾ ಮೂಗೂರು, ಜಯಪ್ಪ ಸಾಲಗಿ, ನಾಗರಾಜ ಕುಬಟೂರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net