ಮೈಸೂರಲ್ಲಿ ಹಂದಿ ಜ್ವರಕ್ಕೆ ಗರ್ಭಿಣಿ ಬಲಿ

New Project(9)
Published on

ಮೈಸೂರು: 9 ತಿಂಗಳ ತುಂಬು ಗರ್ಭಿಣಿಯೊಬ್ಬರು ಮೈಸೂರು ಜಿಲ್ಲೆಯಲ್ಲಿ ಹಂದಿ ಜ್ವರಕ್ಕೆ ಬಲಿಯಾಗಿದ್ದಾರೆ.

ಹುಣಸೂರು ತಾಲೂಕು ಕೋಣನಹೊಸಹಳ್ಳಿ ಗ್ರಾಮದ ಸ್ವಾಮಿನಾಯ್ಕ ಎಂಬುವರ ಪುತ್ರಿ ಛಾಯಾ ಮೃತರು. ಛಾಯಾಗೆ 4 ವರ್ಷದ ಗಂಡು ಮಗು ಇದೆ. 2ನೇ ಮಗುವಿನ ನಿರೀಕ್ಷೆಯಲ್ಲಿ ಕುಟುಂಬವಿತ್ತು. ಇನ್ನು ಕೆಲವೇ ದಿನದಲ್ಲಿ ಮಗುವಿಗೆ ಜನ್ಮ ನೀಡಬೇಕಿದ್ದ ಛಾಯಾಗೆ ಎಚ್‌1ಎನ್1 ಸೋಂಕು ತಗುಲಿತ್ತು.

ಛಾಯಾ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಗುರುವಾರ ಕೊನೆಯುಸಿರೆಳೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net