

ವಿಜಯಪುರ: ವನಶ್ರೀ ಸಂಸ್ಥಾನಮಠ ಗಾಣಿಗ ಗುರುಪೀಠದ ಜಯದೇವ ಜಗದ್ಗುರುಗಳ ಜಯಂತಿ, ಕರ್ತೃ ಗದ್ದುಗೆಯ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ನಗರದ ಜಿಪಂ ಬಳಿಯ ವನಶ್ರೀ ಮಠದಲ್ಲಿ ಅ. 2 ರಂದು ನಡೆಯಲಿದೆ.
ಜಿಲ್ಲಾ ಗಾಣಿಗ ಸಮಾಜ ಸಂ ಮತ್ತು ಜಗದ್ಗುರು ಜಯದೇವ ಶಿವಯೋಗೇಶ್ವರ ಟ್ರಸ್ಟ್ಗಳ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಜಿಲ್ಲೆಯಲ್ಲಿ 2023&24 ನೇ ಸಾಲಿನ ಎಸ್ಎಸ್ಲ್ಸಿ, ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಿ ಪ್ರೋತ್ಸಾಹ ಧನ ನೀಡುವುದರ ಜತೆಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು. ಜಿಲ್ಲಾ ಮಟ್ಟದಲ್ಲಿ ಎಸ್ಎಸ್ಎಲ್ಸಿ ಹಾಗೂ ದ್ವೀತಿಯ ಪಿಯುಸಿ ವಿಾನದಲ್ಲಿ ಶೇ.90 ಕ್ಕಿಂತ ಅಧಿಕ ಮತ್ತು ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ಶೇ. 85 ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ. ಜಿಲ್ಲೆಗೆ ಅಂಟಿಕೊಂಡು ಮಹಾರಾಷ್ಟ್ರದ ಗಡಿಯಲ್ಲಿರುವ ಆ ರಾಜ್ಯದ ತಾಲೂಕುಗಳ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳೂ ಅರ್ಜಿ ಸಲ್ಲಿಸಬಹುದು.
ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿ ಮತ್ತು ಆಧಾರ್ ಕಾರ್ಡ್ ಸಹಿತ ಮಾಹಿತಿಯನ್ನು ಇಲ್ಲಿನ ಜಿಲ್ಲಾ ಕೋರ್ಟ್ ಬಳಿಯ ದಿ ಕರ್ನಾಟಕ ಕೋ&ಆಪರೇಟಿವ್ ಸೊಸೈಟಿ (ಬ್ಯಾಂಕ್)ಯಲ್ಲಿ ಖುದ್ದಾಗಿ ಅಥವಾ ಅಂಚೆ ಮೂಲಕ ಸೆ. 18 ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಬಿ.ಬಿ. ಪಾಸೋಡಿ (ಮೊ.9448037434), ಬಿ.ಕೆ. ಚೌಧರಿ (ಮೊ. 9823191101) ಮತ್ತು ಡಾ. ಬಾಬು ಸಜ್ಜನ (ಮೊ. 9480120391) ಅವರನ್ನು ಸಂಪರ್ಕಿಸುವಂತೆ ಸಂದ ಅಧ್ಯ ಬಿ.ಬಿ. ಪಾಸೋಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.