ಹಿಜಾಬ್​ ಬೇಕು ಅಂದ್ರೆ ಅಫ್ಘಾನಿಸ್ತಾನ, ಪಾಕಿಸ್ತಾನಕ್ಕೆ ಹೋಗಿ: ಪ್ರಮೋದ್ ಮುತಾಲಿಕ್​ ಆಕ್ರೋಶ

19KWR-Pramod Mutalik
Published on

ಬೆಳಗಾವಿ: ಶಾಲಾ-ಕಾಲೇಜು​ಗಳಲ್ಲಿ ಶಿಕ್ಷಣಕ್ಕಿಂತಲೂ ಹಿಜಾಬ್​ ಮುಖ್ಯ ಅನ್ನುವವರು ಅಫ್ಘಾನಿಸ್ತಾನ ಅಥವಾ ಪಾಕಿಸ್ತಾನಕ್ಕೆ ಹೋಗಲಿ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್​ ಆಕ್ರೋಶ ಹೊರಹಾಕಿದರು.

ಬೆಳಗಾವಿಯಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಮುತಾಲಿಕ್​, ಕಾಲೇಜು​ಗಳಲ್ಲಿ ಶೈಕ್ಷಣಿಕ ಶಿಸ್ತಿಗಿಂತ ಇಸ್ಲಾಂ ಸಂಸ್ಕೃತಿಯೇ ಪ್ರಮುಖ ಎನ್ನುವವರು ಅಫ್ಘಾನಿಸ್ತಾನ ಹೋಗಲಿ. ಹಿಜಾಬ್​, ಬುರ್ಕಾ ಧರಿಸುತ್ತೇವೆ, ಅಲ್ಲಿಯೇ ನಮಾಜ್​ ಕೂಡ ಮಾಡುತ್ತೇವೆ ಎನ್ನುವ ಮಟ್ಟಿಗೆ ಸರ್ಕಾರ ಸಡಿಲಿಕೆ ಕೊಡಬಾರದಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆರಂಭದಲ್ಲಿಯೇ ಹಿಜಾಬ್​ಧಾರಿ ವಿದ್ಯಾರ್ಥಿನಿಯನ್ನು ಕಾಲೇಜ್​ಗಳಲ್ಲಿ ಅಮಾನತು ಮಾಡಿದ್ದರೆ, ಈ ವಿಚಾರ ರಾಜ್ಯವ್ಯಾಪಿ ವಿಸ್ತರಿಸುತ್ತಿರಲಿಲ್ಲ. ಈಗಲೂ ಕಾಲ ಮಿಂಚಿಲ್ಲ. ರಾಜ್ಯ ಬಿಜೆಪಿ ಸರ್ಕಾರ ಹಿಜಾಬ್​ ಬೇಕೆಂದು ಹಠ ಮಾಡುವವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಪ್ರಮೋದ್ ಮುತಾಲಿಕ್​ ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net