ಕಾಲೇಜಿ​​​ನಲ್ಲಿ ಹಿಜಾಬ್ ಧರಿಸುವವರಿಗೆ TC ಕೊಟ್ಟು, ಒದ್ದು ಮನೆಗೆ ಕಳಿಸಿ: ಪ್ರಮೋದ್ ಮುತಾಲಿಕ್

1228737
Published on

ಹುಬ್ಬಳ್ಳಿ: ಶಾಲಾ-ಕಾಲೇಜಿಗೆ ಹಿಜಾಬ್ ಹಾಕಿಕೊಂಡು ಬರುವ ಚರ್ಚೆಯೇ ಇಲ್ಲ. ಎಲ್ಲರೂ ಸಮವಸ್ತ್ರವನ್ನ ಹಾಕಿಕೊಳ್ಳಬೇಕು. ಅದರಲ್ಲಿ ಯಾವುದೇ ಜಾತಿ ಇರಲ್ಲ. ಈ ರೀತಿಯ ಬಂಡತನ ಟೆರರಿಸ್ಟ್ ಮಟ್ಟಿಗೆ ತೆಗೆದುಕೊಂಡು ಹೋಗುತ್ತೆ. ಇದು ಶಾಲೆಯೋ ಅಥವಾ ಧಾರ್ಮಿಕ ಕೇಂದ್ರವೋ? ನಿಮ್ಮ ಸ್ವಾತಂತ್ರ್ಯ ಕೇವಲ ನಿಮ್ಮ ಮನೆಯಲ್ಲಿರಲಿ. ಸಮವಸ್ತ್ರದಲ್ಲೇ ಬರಬೇಕು. ಇದಕ್ಕೆ ಆಗಲ್ಲ ಎನ್ನುವವರಿಗೆ ಟಿಸಿ ಕೊಟ್ಟು ಒದ್ದು ಮನೆಗೆ ಕಳಿಸಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್​ ಮುತಾಲಿಕ್​ ಆಕ್ರೋಶ ಹೊರಹಾಕಿದರು.

ಹುಬ್ಬಳ್ಳಿಯಲ್ಲಿ ಮಂಗಳವಾರ ಮಾತನಾಡಿದ ಪ್ರಮೋದ್​ ಮುತಾಲಿಕ್​, ಪ್ರತ್ಯೇಕತೆ ಬೇಕು ಅಂದ್ರೆ ಪಾಕಿಸ್ತಾನಕ್ಕೆ ಹೋಗಿ. ಚಿಂತಾಮಣಿ ಶಾಲೆಯ ಕೊಠಡಿಯಲ್ಲಿ ನಮಾಜ್ ಮಾಡಿದ್ದಾರೆ. ಸರ್ಕಾರ ಈ ವಿಚಾರದಲ್ಲಿ ಕ್ರಮ ಕೈಗೊಳ್ಳಲು ಬಹಳ ಮೀನಮೇಷ ಎಣಿಸುತ್ತಿದೆ. ಇದನ್ನ ಹಾಗೇ ಬಿಡುವುದಾದರೆ ಅವರು ಮುಂದಿನ ದಿನ ಅಪಾಯಕಾರಿಗಳಾಗುತ್ತಾರೆ. ರೈಲ್ವೆ ಸ್ಟೇಷನ್​ನಲ್ಲಿ ನಮಾಜ್​ಗೆ ಅವಕಾಶ ಮಾಡಿಕೊಟ್ಟಿದ್ದೀರಿ. ಹುಬ್ಬಳ್ಳಿಯಲ್ಲೇ ಬಾಂಬ್​ಗಳು ಸಿಕ್ಕರೂ ಇನ್ನೂ ಅವರನ್ನ ಹಿಡಿಯೋಕೆ ಸರ್ಕಾರಕ್ಕೆ ಆಗಿಲ್ಲ. ಹಿಜಾಬ್ ಅನ್ನೋದು ಇಲ್ಲಿಯವರೆಗೂ ಹೋಗಬಾರದಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net