ಜೆಡಿಎಸ್ ಕುಟುಂಬ ರಾಜಕಾರಣದ ಬಗ್ಗೆ ಪ್ರಜ್ವಲ್ ರೇವಣ್ಣ ಖಡಕ್ ಮಾತು!

hdd family
Published on

ಹಾಸನ: ಜೆಡಿಎಸ್ ಕುಟುಂಬ ರಾಜಕಾರಣದ ಬಗ್ಗೆ ಸಂಸದ ಪ್ರಜ್ವಲ್ ರೇವಣ್ಣ ಖಡಕ್ ಆಗಿ ಉತ್ತರಿಸಿದ್ದಾರೆ. 'ಯಡಿಯೂರಪ್ಪ ಅವರ ಮನೆಯಲ್ಲಿ ಮೂವರು, ಡಿ.ಕೆ. ಶಿವಕುಮಾರ್​ ಅವರ ಮನೆಯಲ್ಲಿ ಐದು ಜನ... ಉದಾಸಿ ಸಾಹೇಬ್ರು ಯಾರ್ರೀ? ಉದಾಸಿ ಅವರ ಹಿನ್ನೆಲೆ ಏನು? ಉದಾಸಿ ಅವರ ತಂದೆ ಏನಾಗಿದ್ದರು? ಜಾರಕಿಹೊಳಿ ಫ್ಯಾಮಿಲಿ ಬಗ್ಗೆ ಹೇಳಬೇಕಾ?... ಸುಮ್ನೆ ಏನೇನೋ ಹೇಳೋದಲ್ಲ ರೀ... ದೇವೇಗೌಡರು ಬಿಟ್ಟರೆ ನಮ್ಮ ಕುಟುಂಬದಲ್ಲಿ ರಾಜ್ಯಸಭೆಗಾಗಲೀ, ಎಂಎಲ್​ಸಿಗಾಗಲೀ ನಾವು ಹೋಗೋ ಕೆಲಸ ಮಾಡಿಲ್ಲ. ನಾವು ಜನರ ನೇರ ಆದೇಶದ ಮೇಲೆ ಅಧಿಕಾರಕ್ಕೆ ಬಂದಿರೋದು. ಜನ ತೀರ್ಮಾನ ಮಾಡಲಿ, ಜನ ಬೇಡ ಅಂದ್ರೆ ನಾವು ಹೋಗ್ತೀವಿ. ನಮ್ಮ ಸೇವೆ ಬೇಕು ಅಂದ್ರೆ ಜನ ನಮಗೆ ವೋಟ್​ ಹಾಕ್ತಾರೆ. ಡಾಕ್ಟರ್​ ಮಕ್ಕಳು ಡಾಕ್ಟರ್​ ಆಗ್ಬಾರ್ದಾ? ಎಂದು ಪ್ರಜ್ವಲ್​ ರೇವಣ್ಣ ಪ್ರಶ್ನಿಸಿದ್ದಾರೆ.

ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಜ್ವಲ್​ ರೇವಣ್ಣ, ಇದು ಪ್ರಜಾಪ್ರಭುತ್ವ ದೇಶ. ಕುಟುಂಬ ರಾಜಕಾರಣ ಅಂತ ಪದೇಪದೆ ಅದನ್ನೇ ಹೇಳಬೇಡಿ. ಜನ ತೀರ್ಮಾನ ಮಾಡಲಿ, ಜನ ಬೇಡ ಅಂದ್ರೆ ನಾವು ಹೋಗ್ತೀವಿ. ನಮ್ಮ ಸೇವೆ ಬೇಕು ಅಂದ್ರೆ ಜನ ನಮಗೆ ವೋಟ್​ ಹಾಕ್ತಾರೆ. ಡಾಕ್ಟರ್​ ಮಕ್ಕಳು ಡಾಕ್ಟರ್​ ಆಗ್ಬಾರ್ದಾ? ಅಭಿವೃದ್ಧಿ ಮುಖ್ಯ ರೀ. ಕುಮಾರಣ್ಣ ಮತ್ತು ದೇವೇಗೌಡ ಏನು ಮಾಡಿದ್ದಾರೆ ಅಂತ ಚರ್ಚೆಯಾಗಲಿ. ರಾಯಚೂರಿಗೆ ನೀರು ಕೊಟ್ಟವರು ಯಾರು? ರಾಯಚೂರು ಜಿಲ್ಲೆ ಭತ್ತದ ನಾಡು ಅಂತಾಗಿದೆ. ಇದಕ್ಕೆ ಕಾರಣ ಯಾರು? ನರೇಂದ್ರ ಮೋದಿ, ಸಿದ್ದರಾಮಯ್ಯ, ಯಡಿಯೂರಪ್ಪ, ದೇವೇಗೌಡ... ಇವರಲ್ಲಿ ಯಾರು? ಮೊದಲು ಆ ಬಗ್ಗೆ ಚರ್ಚಿಸಲಿ. ಅಭಿವೃದ್ಧಿ ಮುಖ್ಯ ರೀ. ಕುಮಾರಣ್ಣ ಸಿಎಂ ಆಗಿದ್ದಾಗ ರಾಜ್ಯದಲ್ಲಿ ಸಾರಾಯಿ ಬ್ಯಾನ್​ ಮಾಡಿದ್ರು. ಪರಿಣಾಮ ಲಕ್ಷಾಂತರ ಕುಟುಂಬಕ್ಕೆ ಬದುಕಿನ ಬೆಳಕು ಸಿಕ್ಕಿದೆ... ಸುಮ್ಮನೆ ಯಾವಾಗಲೂ ಕುಟುಂಬ ರಾಜಕಾರಣ ಅಂತ ಹೇಳೋದಲ್ಲಾ? ಯಾರಿಂದ ಎಷ್ಟು ಅಭಿವೃದ್ಧಿ ಆಗಿದೆ ಅನ್ನೋದು ಮುಖ್ಯ... ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net