ಯಶಸ್ಸು ಸಾಧಿಸಲು ಸಕಾರಾತ್ಮಕ ಧೋರಣೆ ಅಗತ್ಯ

A handwritten book by students at SDM College, Honnavara, 'Bloom' was created by retired professor S.N. Hegade was released.
Published on

ಹೊನ್ನಾವರ: ‘ಜೀವನದಲ್ಲಿ ಕಠಿಣ ಪರಿಸ್ಥಿತಿಯನ್ನು ಎದುರಿಸಿ ಯಶಸ್ಸು ಪಡೆಯಲು ಸಕಾರಾತ್ಮಕ ಧೋರಣೆ ಅಗತ್ಯ’ ಎಂದು ನಿವೃತ್ತ ಪ್ರಾಧ್ಯಾಪಕ ಎಸ್.ಎನ್. ಹೆಗಡೆ ಹೇಳಿದರು.

ಎಸ್​ಡಿಎಂ ಪದವಿ ಕಾಲೇಜಿನ ಇಂಗ್ಲಿಷ್ ಲಿಟರರಿ ಕ್ಲಬ್ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಕೈ ಬರಹ ದ್ವೈವಾರ್ಷಿಕ ಪುಸ್ತಕ ‘ಬ್ಲೂಮ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಕಾಲೇಜಿನಲ್ಲಿ ಪ್ರಕಟಿಸಲ್ಪಡುವ ಪತ್ರಿಕೆ ಅಥವಾ ಪುಸ್ತಕಗಳನ್ನು ಡಿಜಿಟಲೀಕರಣಗೊಳಿಸಿ ಹೆಚ್ಚಿನ ಜನರಿಗೆ ಹಾಗೂ ಕಾಲದವರೆಗೆ ಅದು ಓದುಗರಿಗೆ ದೊರೆಯುವಂತೆ ಮಾಡಬಹುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಪಿ.ಎಂ. ಹೊನ್ನಾವರ ಮಾತನಾಡಿ, ವಿದ್ಯಾರ್ಥಿಗಳು ಜ್ಞಾನ ಸಂಪಾದನೆಯ ಜತೆಗೆ ಉತ್ತಮ ವರ್ತನೆಗಳನ್ನು ರೂಢಿಸಿಕೊಂಡು ಒಳ್ಳೆಯ ನಾಗರಿಕರಾಗಬೇಕು ಎಂದರು.

ನಿಹಾರಿಕಾ ಭಟ್ಟ ಪ್ರಾರ್ಥನಾ ಗೀತೆ ಹಾಡಿದರು. ವೆಲೆನ್ಶಿಯಾ ಡಿಸೋಜಾ ಸ್ವಾಗತಿಸಿದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಡಾ. ಎಂ.ಜಿ. ಹೆಗಡೆ ಅತಿಥಿ ಪರಿಚಯ ಮಾಡಿದರು. ದರ್ಶನ ಗೌಡ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net