ಗ್ರಾಮೀಣ ಪ್ರದೇಶದಲ್ಲಿ ಹಾಸುಹೊಕ್ಕಾದ ಜನಪದ ಭಾಷೆ

Kasapa
Published on

ಬ್ಯಾಡಗಿ: ಗ್ರಾಮೀಣ ಪ್ರದೇಶದಲ್ಲಿ ಹಾಸುಹೊಕ್ಕಾಗಿರುವ ಜನಪದ ಭಾಷೆ, ಸಾಹಿತ್ಯದ ಸಂಭ್ರಮ ಆಚರಣೆಗಳಲ್ಲಿ ಜೀವಂತವಾಗಿ ಉಳಿದುಕೊಂಡಿವೆ ಎಂದು ಕಸಾಪ ತಾಲೂಕಾಧ್ಯಕ್ಷ ಬಿ.ಎಂ. ಜಗಾಪುರ ತಿಳಿಸಿದರು.

ತಾಲೂಕಿನ ಛತ್ರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಿಂಗಮ್ಮ ಕಳಸೂರಮಠ ಪುಣ್ಯಸ್ಮರಣೋತ್ಸವ ಅಂಗವಾಗಿ ಶನಿವಾರ ಏರ್ಪಡಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಾತ್ರೆ, ಉತ್ಸವ, ಹಬ್ಬ ಹರಿದಿನಗಳು ಜಾನಪದ ಶೈಲಿಯಲ್ಲಿ ನಡೆಯುತ್ತಿವೆ. ಹಿರಿಜೀವಿಗಳನ್ನು ಗೌರವಿಸುವುದು, ಗುರುಗಳನ್ನು ಪೂಜ್ಯಭಾವನೆಯಿಂದ ನೋಡುವುದು, ಸಮಾನತೆ, ಭಾವೈಕ್ಯ ಇತ್ಯಾದಿಗಳನ್ನು ಜನಪದ ಸಾಹಿತ್ಯ ಒಳಗೊಂಡಿದೆ ಎಂದರು.

ಜನಪದ ಸಾಹಿತ್ಯ ವಿಷಯ ಕುರಿತು ಶಿಕ್ಷಕ ಡಿ.ಎನ್. ಅಲ್ಲಾಪೂರ ಉಪನ್ಯಾಸ ನೀಡಿದರು. ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕ ಎನ್. ರಾಜಶೇಖರಪ್ಪ ವಹಿಸಿದ್ದರು. ಡಾ. ಉಮಾದೇವಿ ಕಳಸೂರಮಠ, ದತ್ತಿದಾನಿ ಡಾ. ಮೂಕಯ್ಯಸ್ವಾಮಿ ಕಳಸೂರಮಠ, ಉದ್ಯಮಿ ವೀರಯ್ಯಸ್ವಾಮಿ ಹಿರೇಮಠ, ನಾಗರಾಜ ಆನ್ವೇರಿ, ಡಾ. ಪಿ.ಟಿ. ಲಕ್ಕಣ್ಣನವರ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ.ಕೋಟಿ, ಉಪನ್ಯಾಸಕ ಎಸ್.ಎಸ್.ಅಡಿಗ, ಮುಖ್ಯಶಿಕ್ಷಕ ಎನ್.ಎಚ್. ಮುದಿಗೌಡ್ರ, ಗ್ರಾಪಂ ಅಧ್ಯಕ್ಷ ಬಸಪ್ಪ ಗೆಣೇಣ್ಣನವರ, ಉಪಾಧ್ಯಕ್ಷೆ ದ್ಯಾಮವ್ವ ನಾಯಕ, ಶಿವಪ್ಪ ಪೋಟೇರ, ಸಂಗೀತಾ ಹಿರೇಮಠ, ಹನಮಂತಪ್ಪ ಓಲೇಕಾರ, ಪರಸಪ್ಪ ಹಾವೇರಿ, ಸೋಮಣ್ಣ ಕುರಿಯವರ, ಸುನಿತಾ ಓಲೇಕಾರ, ಬಸವರಾಜ ಬೆಳಕೇರಿ, ದಿಳ್ಳೆಪ್ಪ ಕುರಿಯವರ, ಜಯಣ್ಣ ಚಿಲ್ಲೂರಮಠ, ಗಿರೀಶಸ್ವಾಮಿ ಇಂಡಿಮಠ, ಮಲ್ಲಿಕಾರ್ಜುನ ಬಳ್ಳಾರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net