ಕಳಶ ಪ್ರತಿಷ್ಠಾಪನೆ, ಪೂರ್ಣಕುಂಭ ಮೆರವಣಿಗೆ

28arsph1ep
Published on

ಅರಸೀಕೆರೆ: ಹಾಸನ ರಸ್ತೆ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಮುತ್ತುಮಾರಿಯಮ್ಮ ದೇವಿ ದೇಗುಲದ ಕಳಶ ಪ್ರತಿಷ್ಠಾಪನೆ ಹಾಗೂ ಪ್ರವೇಶ ಮಹೋತ್ಸವ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು.

ತಿಪಟೂರು ತಾಲೂಕು ಕೆರೆಗೋಡಿ ರಂಗಾಪುರ ಶ್ರೀ ಮಠದ ಪೀಠಾಧ್ಯಕ್ಷ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ ಸೂರ್ಯೋದಯಕ್ಕೂ ಮುನ್ನ ಶಾಸೋಕ್ತವಾಗಿ ಪೂಜೆ, ಪುನಸ್ಕಾರದೊಂದಿಗೆ ನೂರಾರು ಭಕ್ತರ ಜಯಘೋಷದ ನಡುವೆ ಕಳಶ ಪ್ರತಿಷ್ಠಾಪನೆ ಮಾಡಿದರು.

ಇದಕ್ಕೂ ಮುನ್ನ ಜೇನುಕಲ್ ಸಿದ್ದೇಶ್ವರಸ್ವಾಮಿ, ಗ್ರಾಮ ದೇವತೆಗಳಾದ ಕರಿಯಮ್ಮ, ಮಲ್ಲಿಗೆಮ್ಮ, ಚೆಲ್ಲಾಪುರ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ಉತ್ಸವ ಮೂರ್ತಿಗಳ ಸಮ್ಮುಖದಲ್ಲಿ ಗಣಪತಿ ಹೋಮ, ನವಗ್ರಹ ಹೋಮ ಸೇರಿ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು. ಬೆಲಗೂರಿನ ಶ್ರೀಬಿಂಧು ಮಾಧವ ಸ್ವಾಮೀಜಿ, ಯಳನಾಡು ಶ್ರೀ ಜ್ಞಾನಪ್ರಭು ಸಿದ್ದರಾಮದೇಶಿಕೇಂದ್ರ ಸ್ವಾಮೀಜಿ, ಮಾಡಾಳು ನಿರಂಜನ ಪೀಠದ ಶ್ರೀ ರುದ್ರಮುನಿ ಸ್ವಾಮೀಜಿ ಹೋಮ-ಹವನಗಳಲ್ಲಿ ಪಾಲ್ಗೊಂಡಿದ್ದರು.

ಶಾಸಕ ಕೆ.ಎಂ.ಶಿವಲಿಂಗೇಗೌಡ, ಮಾಜಿ ಸಚಿವ ಬಿ.ಶಿವರಾಂ, ಪುರಸಭಾ ಮಾಜಿ ಅಧ್ಯಕ್ಷ ದೇವಕುಮಾರ್, ನಗರಸಭಾ ಸದಸ್ಯೆ ಅಭಿರಾಮಿ, ಮುಖಂಡರಾದ ಶಿವನ್‌ರಾಜ್, ಹರೀಶ್, ವಿನೋದ್ ಕುಟ್ಟಿ, ಮಂಜುನಾಥ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net