ಲಾಕ್ಡೌನ್ ನಿಯಮ ಗಾಳಿಗೆ ತೂರಿ ಮದುವೆ ಪಾರ್ಟಿ ಮಾಡಿದ್ದವರ ಮೇಲೆ ಬಿತ್ತು ಕೇಸ್!

rave party
Published on

ಮಂಗಳೂರು: ಕೋವಿಡ್ ಲಾಕ್ಡೌನ್ ನಿಯಮ ಗಾಳಿಗೆ ತೂರಿ ಸಾಮೂಹಿಕ ಡ್ಯಾನ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಮದುವೆ ಪಾರ್ಟಿ ಆಯೋಜಕರ ಮೇಲೆ ದೂರು ದಾಖಲಾಗಿದೆ.

ಮಂಗಳೂರಿನ ಅಡ್ಯಾರು ಬಳಿ ಭರ್ಜರಿ ಮದುವೆ ಪಾರ್ಟಿ ಮಾಡಲಾಗಿತ್ತು.  ರಂಜಿತ್ ಎಂಬುವವರ ಮೇಲೆ ದೂರು ದಾಖಲಾಗಿದೆ. ಪಾರ್ಟಿಯಲ್ಲಿ ತಡರಾತ್ರಿವರೆಗೂ ಕುಣಿದು ಕುಪ್ಪಳಿಸಿದ್ದ ಜನರು. ಮದುವೆಯ ಪಾರ್ಟಿಯಲ್ಲಿ ನೂರಕ್ಕೂ ಹೆಚ್ಚು ಜನರ ಜಮಾವಣೆ ಆಗಿತ್ತು.

ಮಾಸ್ಕ್ ಹಾಕದೇ ಸಾಮಾಜಿಕ ಅಂತರ ಮರೆತು ಡ್ಯಾನ್ಸ್ ಮಾಡಲಾಗಿತ್ತು. ಈ ವೇಳೆ ಡಿಜೆ ಹಾಕಿಕೊಂಡು ಸಕತ್ ಎಂಜಾಯ್ ಮಾಡಿದ್ದ ಯುವಕ-ಯುವತಿಯರು ಡ್ಯಾನ್ಸ್ ಮಾಡಿದ್ದರು.

ಅಡ್ಯಾರ್ ಪಂಚಾಯತ್ ಪಿ.ಡಿ.ಓ ಕೃಷ್ಣ ನಾಯ್ಕ್ ನೀಡಿದ ದೂರಿನ ಹಿನ್ನೆಲೆ ಪ್ರಕರಣ ದಾಖಲಾಗಿದೆ. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net