ವಿಷ ಕುಡಿದು ಪ್ರಾಣ ಬಿಟ್ಟ ದಂಪತಿ: ಮಕ್ಕಳ ನಿರ್ಲಕ್ಷ್ಯಕ್ಕೆ ಬಲಿಯಾದವೇ ಹಿರಿಜೀವಗಳು...

Poison vvani
Published on

ದೊಡ್ಡಬಳ್ಳಾಪುರ: ಇಬ್ಬರು ಗಂಡು ಮಕ್ಕಳಿದ್ದರೂ ಈ ತಂದೆ-ತಾಯಿಗೆ ಆಸರೆ ಸಿಗಲಿಲ್ಲ. ಮನನೊಂದ ದಂಪತಿ ಇಬ್ಬರೂ ವಿಷ ಕುಡಿದು ಮೃತಪಟ್ಟ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಹಾದ್ರೀಪುರ ಗ್ರಾಮದಲ್ಲಿ ನಡೆದಿದೆ.

ಮಾರೇಗೌಡ (62) ಮತ್ತು ಇವರ ಪತ್ನಿ ಗಂಗಮ್ಮ(55) ಮೃತರು. ಈ ದಂಪತಿಗೆ ಗಂಡು ಮಕ್ಕಳಿಬ್ಬರು ಇದ್ದಾರೆ. ಹಿರಿಯ ಮಗ ರಿಸರ್ವ್ ಪೊಲೀಸ್ ವಿಭಾಗದಲ್ಲಿ ಇನ್ಸ್​​ಪೆಕ್ಟರ್ ಆಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಕಿರಿಯ ಮಗ ಸ್ವಗ್ರಾಮದಲ್ಲೇ ಪತ್ನಿ ಜತೆ ವಾಸವಿದ್ದಾರೆ.

ಅಂಗವಿಕಲರಾದ ಮಾರೇಗೌಡರನ್ನು ಪತ್ನಿ ಗಂಗಮ್ಮ ನೋಡಿಕೊಳ್ಳುತ್ತಿದ್ದರು. ಮಕ್ಕಳಿಬ್ಬರೂ ಅಪ್ಪ-ಅಮ್ಮನನ್ನು ನೋಡಿಕೊಳ್ಳುತ್ತಿರಲಿಲ್ಲ ಎನ್ನಲಾಗಿದೆ. ಇದೇ ವಿಚಾರಕ್ಕೆ ದಂಪತಿ ಮನನೊಂದಿದ್ದರು. ಇತ್ತೀಚಿಗೆ ಕಿರಿಯ ಮಗ ತನ್ನ ಹೆಂಡತಿ ಮನೆಯವರಿಗೆ ಗೀಸರ್ ಕೊಡಿಸಿದ್ದನಂತೆ. ಈ ವಿಚಾರವಾಗಿ ಅಪ್ಪ-ಅಮ್ಮ ಮತ್ತು ಮಗನ ನಡುವೆ ಜಗಳ ಕೂಡ ಆಗಿತ್ತಂತೆ. ಈ ಎಲ್ಲ ಬೆಳವಣಿಗೆ ಬಳಿಕ ವಿಷ ಕುಡಿದು ವಿಲವಿಲ ಒದ್ದಾಡುತ್ತಿದ್ದ ದಂಪತಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಬದುಕಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net