2 ದಿನದ ರಾಜ್ಯ ಪ್ರವಾಸ ಅಂತ್ಯ: ಮೈಸೂರಿಂದ ದೆಹಲಿಯತ್ತ ಹೊರಟ ಪ್ರಧಾನಿ ಮೋದಿ

modi in mysuru
Published on

ಮೈಸೂರು‌: ವಿಶ್ವ ಯೋಗ ದಿನಾಚರಣೆ ಹಿನ್ನೆಲೆ ರಾಜ್ಯಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಮಂಗಳವಾರ ಬೆಳಗ್ಗೆ 10.35ಕ್ಕೆ ಮೈಸೂರಿನಿಂದ ದೆಹಲಿಗೆ ವಿಶೇಷ ವಿಮಾನದಲ್ಲಿ ತೆರಳಿದರು.

ಸಾಂಸ್ಕೃತಿನ ನಗರಿ ಮೈಸೂರಿನಲ್ಲಿ ನಡೆಯಲಿರುವ ವಿಶ್ವ ಯೋಗ ದಿನಾಚರಣೆಯಲ್ಲಿ ಭಾಗವಹಿಸುವುದು ಪ್ರಧಾನಿ ಮೋದಿ ಅವರ ಭೇಟಿಯ ಮುಖ್ಯ ಉದ್ದೇಶವಾಗಿದ್ದು, ಅದರೊಂದಿಗೆ ಅಭಿವೃದ್ಧಿ ಪಥವನ್ನು ಜೋಡಿಸಿ ಬೆಂಗಳೂರು ಬ್ರಾಂಡ್​ಗೆ ಹೊಸ ಹೊಳಪು ನೀಡಲು ರಾಜ್ಯ ನಾಯಕತ್ವ ಮುಂದಾಗಿದೆ. ಬಹುಸಾವಿರ ಕೋಟಿ ರೂ.ಗಳ ಮೊತ್ತದ ಯೋಜನೆಗಳಿಗೆ ಅಡಿಗಲ್ಲು ಮತ್ತು ಉದ್ಘಾಟನೆಗಳೆಲ್ಲ ಬೆಂಗಳೂರು ಕೇಂದ್ರಿತವಾಗಿದೆ.

ಕೈ ಮುಗಿದು ಮೈಸೂರು ಅರಮನೆಯಿಂದ ನಿರ್ಗಮಿಸಿದ ಮೋದಿ, ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಕಾರಿನಲ್ಲಿ‌ ತೆರಳುವಾಗಲೂ ಕೈ ಮುಗಿದರು. ಈ ಮೂಲಕ ಸಾಂಸ್ಕೃತಿಕ ನಗರಿ ಜನತೆಗೆ ಧನ್ಯವಾದ ತಿಳಿಸಿದರು.

ಇನ್ನು ವಿಮಾನ ನಿಲ್ದಾಣಕ್ಕೆ ಮೋದಿ ತೆರಳುತ್ತಿದ್ದ ರಸ್ತೆಯುದ್ದಕ್ಕೂ ಜಮಾವಣೆಯಾಗಿದ್ದ ಮೋದಿ.. ಮೋದಿ.. ಎಂದು ಜೈಕಾರ ಕೂಗುತ್ತಿದ್ದರು. ನಂಜನಗೂಡು ರಸ್ತೆಯ JSS ಕಾಲೇಜು ಬಳಿ ಬಿಜೆಪಿ ಬಾವುಟ, ಮೋದಿ ಭಾವಚಿತ್ರ ಹಿಡಿದು ಸಹಸ್ರಾರು ಜನ ಕಾಯುತ್ತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net