ಮೈಸೂರಲ್ಲಿ ಡಿಜಿಟಲ್​ ಯೋಗ ಕೇಂದ್ರ ಉದ್ಘಾಟಿಸಿದ ಪ್ರಧಾನಿ ಮೋದಿ

modi in mysuru
Published on

ಮೈಸೂರು: ಅರಮನೆ ಆವರಣದಲ್ಲಿ ವಿಶ್ವ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಸತತ 45 ನಿಮಿಷ ಕಾಲ ಸಾವಿರಾರು ಯೋಗಪಟುಗಳ ಜತೆ ಯೋಗ ಪ್ರದರ್ಶನ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು ಬಳಿಕ ಡಿಜಿಟಲ್​ ಯೋಗ ಕೇಂದ್ರವನ್ನು ಉದ್ಘಾಟಿಸಿದರು.

ವಸ್ತುಪ್ರದರ್ಶನ ಸಂಗ್ರಹಾಲಯದಲ್ಲಿ ನಿರ್ಮಿಸಲಾಗಿರುವ ಡಿಜಿಟಲ್​ ಯೋಗ ಕೇಂದ್ರವನ್ನು ವೀಕ್ಷಿಸಿದ ಪ್ರಧಾನಿ, ಅತ್ಯದ್ಭುತವಾಗಿದೆ ಎಂದು ಬಣ್ಣಿಸಿದರು. ರಾಜ್ಯಪಾಲ ಥಾವರ್​ಚಂದ್​ ಗೆಲ್ಹೋಟ್​, ಸಿಎಂ ಬಸವರಾಜ ಬೊಮ್ಮಾಯಿ ಉಪಸ್ಥಿತರಿದ್ದರು.

ಅರಮನೆಗೆ ತೆರಳಿರುವ ಪ್ರಧಾನಿ ಮೋದಿ ಅವರು ಮೈಸೂರು ರಾಜವಂಶಸ್ಥರ ಜತೆ ಮಾತುಕತೆ ನಡೆಸುವ ಜತೆಗೆ, ಅವರ ನಿವಾಸದಲ್ಲಿಯೇ ಉಪಹಾರ ಸೇವಿಸಲಿದ್ದಾರೆ. ಪ್ರಧಾನಮಂತ್ರಿ ಜತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಆಯುಷ್​ ಸಚಿವರು ಭಾಗವಹಿಸಲಿದ್ದಾರೆ. ಬೆ.9.30ರ ನಂತರ ಮೈಸೂರು ವಿಮಾನ ನಿಲ್ದಾಣದಿಂದ ಕೇರಳಕ್ಕೆ ಪ್ರಯಾಣ ಮಾಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net