ಮಂಗಳೂರಲ್ಲಿ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ: ಶ್ರೀಕೃಷ್ಣ, ಪರಶುರಾಮ ವಿಗ್ರಹ ಉಡುಗೊರೆ

New Project(18)
Published on

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಆಗಮಿಸಿದ್ದು, ಅಭಿಮಾನಿಗಳಿಂದ ಹರ್ಷೋದ್ಘಾರ ಮೊಳಗುತ್ತಿದೆ. ಸಹಸ್ರಾರು ಕಾರ್ಯಕರ್ತರು ರಸ್ತೆಯ ಬದಿಯಲ್ಲೂ ನಿಂತು ಜೈ ಮೋದಿ ಎಂದು ಘೋಷಣೆ ಕೂಗುತ್ತಾ ಸ್ವಾಗತಿಸಿದ್ದಾರೆ.

ಶುಕ್ರವಾರ ಮಧ್ಯಾಹ್ನ 1.35ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮೋದಿ ಅವರು, ಅಲ್ಲಿಂದ ಎನ್ಎಂಪಿಎ ಹೆಲಿಪ್ಯಾಡ್‌ಗೆ ಸೇನಾ ಹೆಲಿಕಾಪ್ಟರಿನಲ್ಲಿ ಬಂದಿಳಿದರು. ಅಲ್ಲಿಂದ ರಸ್ತೆ ಮಾರ್ಗವಾಗಿ 2 ಗಂಟೆಗೆ ಸಮಾವೇಶ ನಡೆಯುವ ನಗರದ ಗೋಲ್ಡ್ ಫಿಂಚ್ ಸಿಟಿ ಮೈದಾನಕ್ಕೆ ಆಗಮಿಸಿದರು. ಮೋದಿ ಅವರನ್ನ ಸ್ವಾಗತಿಸಲು ಸರತಿ ಸಾಲಿನಲ್ಲಿ ರಾಜ್ಯ ನಾಯಕರು ನಿಂತಿದ್ದರೆ, ಅತ್ತ ಮೋದಿ ಅವರನ್ನ ನೋಡಲು ವೇದಿಕೆ ಹಿಂಭಾಗದಲ್ಲಿ ಗುಂಪು ಗುಂಪಾಗಿ ಅಭಿಮಾನಿಗಳು ಕಾಯುತ್ತಿದ್ದ ದೃಶ್ಯ ಕಂಡು ಬಂತು.

ನಗರದ ಗೋಲ್ಡ್ ಫಿಂಚ್ ಸಿಟಿಯಲ್ಲಿ ಹಮ್ಮಿಕೊಂಡಿರುವ ವೇದಿಕೆ ಕಾರ್ಯಕಮಕ್ಕೆ ಆಗಮಿಸಿದ ಪ್ರಧಾನಿ ಅವರಿಗೆ ಮಡಿಕೇರಿ ಪೇಟ ತೊಡಿಸಲಾಯಿತು. ಈ ಭಾಗದ ವಿಶೇಷ ಮಲ್ಲಿಗೆ ಹಾರವನ್ನು ಮೋದಿ ಅವರಿಗೆ ನಳಿನ್​ ಕುಮಾರ್​ ಕಟೀಲ್ ಹಾಕಿದರೆ, ಪರಶುರಾಮ ವಿಗ್ರಹವನ್ನು ಸುನೀಲ್ ಕುಮಾರ್ ನೀಡಿದರು. ಸಿಎಂ ಬಸವರಾಜಬೊಮ್ಮಾಯಿ ಅವರು ಹಸಿರು ಶಾಲು ಹೊದಿಸಿ ನಮಸ್ಕರಿಸಿದರು.

ನವಮಂಗಳೂರು ಬಂದರು, ಎಂಆರ್‌ಪಿಎಲ್, ಮೀನುಗಾರಿಕಾ ಬಂದರು ಸಹಿತ 3,800 ಕೋಟಿ ರೂ. ವೆಚ್ಚದ ಯೋಜನೆಗಳ ಶಿಲಾನ್ಯಾಸ-ಉದ್ಘಾಟನೆ ಕಾರ್ಯಕ್ರಮಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಮಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net