ಬೆಂಗಳೂರು ಕೃಷಿ ವಿವಿಗೆ ‘ಎ ಪ್ಲಸ್’ ನ್ಯಾಕ್ ಮಾನ್ಯತೆ

agri vv
Published on

ಬೆಂಗಳೂರು: ರಾಜ್ಯದ ಮೊದಲ ಕೃಷಿ ವಿವಿ ಖ್ಯಾತಿಯ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ (ಯುಎಎಸ್-ಬಿ) ರಾಷ್ಟ್ರೀಯ ಮೌಲ್ಯಮಾಪನ ಹಾಗೂ ಮಾನ್ಯತಾ ಮಂಡಳಿ (ನ್ಯಾಕ್) ನಿಂದ ‘ಎ ಪ್ಲಸ್’ ಶ್ರೇಯಾಂಕಕ್ಕೆ ಪಾತ್ರವಾಗಿದೆ.

ಇತ್ತೀಚಿಗೆ ನ್ಯಾಕ್ ತಂಡವು ಕೃಷಿ ವಿಶ್ವವಿದ್ಯಾಲಯ ಹಾಗೂ ವಿವಿಧ ಕಾಲೇಜುಗಳಿಗೆ ಭೇಟಿ ನೀಡಿ ಸಮಗ್ರ ಮೌಲ್ಯಮಾಪನವನ್ನು ಕೈಗೊಂಡಿತ್ತು. ಈ ಮೌಲ್ಯಮಾಪನದ ಬಳಿಕ ನ್ಯಾಕ್ ಸಂಸ್ಥೆಯು ವಿವಿಗೆ ಶ್ರೇಯಾಂಕ ನೀಡಿದೆ. ಈ ಮಾನ್ಯತೆಯು ಗುರುವಾರ (ಫೆ.13) ದಿಂದಲೇ ಅನ್ವಯವಾಗಲಿದ್ದು, ಮುಂದಿನ ಐದು ವರ್ಷದವರೆಗೆ ಚಾಲ್ತಿಯಲ್ಲಿರುತ್ತದೆ ಎಂದು ಯುಎಎಸ್-ಬಿ ಕುಲಪತಿ ಡಾ. ಎಸ್.ವಿ.ಸುರೇಶ್ ತಿಳಿಸಿದ್ದಾರೆ.

ಯುಎಎಸ್-ಬಿಗೆ ನ್ಯಾಕ್‌ನಿಂದ ಎ ಪ್ಲಸ್ ಮಾನ್ಯತೆ ದೊರೆತಿರುವುದು ರಾಜ್ಯ ಸರ್ಕಾರದ ಬೆಂಬಲ ಹಾಗೂ ಬೋಧಕ-ಬೋಧಕೇತರ ಬಳಗ, ವಿದ್ಯಾರ್ಥಿ ವೃಂದ ಹಾಗೂ ಪಾಲುದಾರರ ಸಾಮೂಹಿಕ ಪ್ರಯತ್ನದ ಲಿತಾಂಶವಾಗಿದೆ. ಇದರಿಂದ ಕೃಷಿ ಸಮುದಾಯ, ರಾಷ್ಟ್ರದ ಕ್ಷೇತ್ರಕ್ಕೆ ಸೇವೆ ಸಲ್ಲಿಸಲು ನಮ್ಮ ಶೈಕ್ಷಣಿಕ ಹಾಗೂ ಸಂಶೋಧನಾ ಪ್ರಯತ್ನ ಹೆಚ್ಚಿಸಿಕೊಳ್ಳಲು ನಮಗೆ ಸ್ಫೂರ್ತಿ ನೀಡಿದೆ.

- ಡಾ. ಎಸ್.ವಿ.ಸುರೇಶ್, ಕುಲಪತಿ, ಯುಎಎಸ್-ಬಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net