ಕಳವು ಪ್ರಕರಣ ತಡೆಯಲು ಮನವಿ

h11-merchan association
Published on

ಹುಬ್ಬಳ್ಳಿ: ಹುಬ್ಬಳ್ಳಿ ಅಮರಗೋಳ ಮುಖ್ಯ ಕೃಷಿ ಉತ್ಪನ್ನ ಪ್ರಾಂಗಣಕ್ಕೆ ಸೋಮವಾರ ಭೇಟಿ ನೀಡಿದ ಹುಬ್ಬಳ್ಳಿ-ಧಾರವಾಡ ಪೋಲೀಸ್ ಆಯುಕ್ತ ಎನ್. ಶಶಿಕುಮಾರ ಅವರಿಗೆ ವ್ಯಾಪಾರಸ್ಥರ ಸಂಘದಿಂದ ಮನವಿ ಸಲ್ಲಿಸಲಾಯಿತು.

ಮಾರುಕಟ್ಟೆಯಲ್ಲಿ ಇತ್ತೀಚೆಗೆ ಕಳವು ಪ್ರಕರಣಗಳು ಜರುಗುತ್ತಿದ್ದು ತಡೆಯಬೇಕು. ರೈತರು ಮತ್ತು ಸಾರ್ವಜನಿಕರ ವಾಹನಗಳನ್ನು ಮಾರುಕಟ್ಟೆಯೊಳಗೆ ಸುಗಮವಾಗಿ ಸಂಚರಿಸಲು ಅನುವು ಮಾಡಿಕೊಡಬೇಕು ಎಂದು ಮನವಿ ಸಲ್ಲಿಸಿದ್ದಲ್ಲದೆ ಆಯುಕ್ತರನ್ನು ಗೌರವಿಸಲಾಯಿತು.

ಸಂಘದ ಅಧ್ಯಕ್ಷ ರಾಜಕಿರಣ ಬಿ. ಮೆಣಸಿನಕಾಯಿ, ಗೌರವ ಕಾರ್ಯದರ್ಶಿ ಅಶೋಕ ಬಾಳಿಕಾಯಿ, ಎ.ಪಿ.ಎಂ.ಸಿ. ಸಹಾಯಕ ಕಾರ್ಯದರ್ಶಿ ಮಂಜುನಾಥ ಹುಬ್ಬಳ್ಳಿ, ಮಾಜಿ ಅಧ್ಯಕ್ಷ ಗಂಗನಗೌಡ ಪಾಟೀಲ, ಶಂಭುಲಿಂಗಪ್ಪ ಅಂಗಡಿ, ಬಸವರಾಜ ಅಕ್ಕಿ, ಸುರೇಶ ಜೈನ್, ಶ್ರೀನಿವಾಸ ಸೋಳಂಕಿ, ವಿನೋದ ತಲ್ಲೂರ, ಶಿವಯೋಗಿ ಹೊಸಕಟ್ಟಿ, ನಾರಾಯಣ ಭಂಡಾರಕರ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net