ಪತ್ರಕರ್ತರು, ವಿತರಕರಿಗೆ ನಿವೇಶನ

GS Kumaragowda
Published on

ಚಿತ್ರದುರ್ಗ: ವಿತರಕರ ಸಮಸ್ಯೆಗಳಿಗೆ ಸ್ಪಂದಿಸಲು ತ್ವರಿತವಾಗಿ 30 ಲಕ್ಷ ರೂ. ಬಿಡುಗಡೆಗೆ ಸಿಎಂಗೆ ಒತ್ತಾಯಿಸುತ್ತೇನೆ ಎಂದು ಕೆಪಿಸಿಸಿ ಸಂಚಾಲಕ ಕುಮಾರ್‌ಗೌಡ ಹೇಳಿದರು.

ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ, ಜಿಲ್ಲಾ ಕಾರ್ಯನಿರತ ಪತ್ರಿಕಾ ಹಂಚಿಕೆದಾರರ ಮತ್ತು ವಿತರಕರ ಸಂಘದಿಂದ ಪತ್ರಿಕಾ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಗರ ವ್ಯಾಪ್ತಿಯಲ್ಲಿ 5 ಎಕರೆ ಸ್ಥಳ ಜಿಲ್ಲಾಡಳಿತ ಗುರುತಿಸಿದರೆ ವಿತರಕರು, ಪತ್ರಕರ್ತರು ಎಲ್ಲರಿಗೂ ನಿವೇಶನ ಸಿಗಲಿದೆ. ಈ ಕಡತಕ್ಕೆ ಸರ್ಕಾರದಿಂದ ಮಂಜೂರಾತಿ ಕೊಡಿಸುವ ಜವಾಬ್ದಾರಿ ನನ್ನದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net