ಶಾಲಾ ಮೈದಾನದಲ್ಲಿ ಹೊಂಡ

Btw_A pit
Published on

ಬಂಟ್ವಾಳ: ಬಿ.ಸಿ.ರೋಡ್‌ನ ಅಜ್ಜಿಬೆಟ್ಟುವಿನ ಬಿ.ಮೂಡ ಶಾಲಾ ಮೈದಾನದಲ್ಲಿ ಒಂದು ಅಪಾಯಕಾರಿ ಹೊಂಡ ಸೃಷ್ಟಿಯಾಗಿದೆ. ಕಳೆದ ಕೆಲವು ಸಮಯಗಳಿಂದ ಚಿಕ್ಕದಾಗಿದ್ದ ಹೊಂಡ ಈಗ ಅಗಾಧವಾಗಿ ಬಾಯ್ತೆರೆದಿದೆ.

ಅಜ್ಜಿಬೆಟ್ಟುವಿನಲ್ಲಿ ಬಿ.ಮೂಡ ಸರ್ಕಾರಿ ಹಿರಿಯ ಪಾಥಮಿಕ ಶಾಲೆ ಮತ್ತು ಪ್ರೌಢಶಾಲೆ ಇದ್ದು, ಎರಡೂ ಶಾಲೆಗಳ ನೂರಾರು ಮಕ್ಕಳ ದೈಹಿಕ ಶಿಕ್ಷಣ ಚಟುವಟಿಕೆಗಳಿಗೆ ಈ ಮೈದಾನವೇ ಆಸರೆ. ಪ್ರಸ್ತುತ ಶಾಲಾ ಆಟದ ಮೈದಾನ ಮಧ್ಯದಲ್ಲಿ ಹೊಂಡವೊಂದು ರೂಪುಗೊಂಡಿದ್ದು, ಹೊರನೋಟಕ್ಕೆ ಕಾಣಿಸದಿದ್ದರೂ ಹತ್ತಿರ ಬಂದಾಗ ಬೃಹದಾಕಾರವಾಗಿರುವುದು ಗೋಚರವಾಗುತ್ತದೆ.

ಈ ಹೊಂಡ ಹೇಗೆ ನಿರ್ಮಾಣವಾಯಿತು? ಎನ್ನುವ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ಶಾಲೆಯಿಂದ ಸುಮಾರು 100 ಮೀಟರ್ ದೂರದಲ್ಲಿ ಮೈದಾನವಿರುವ ಕಾರಣ, ಶಾಲೆಯ ಗಮನಕ್ಕೆ ಬಂದ ತಕ್ಷಣ ಸಂಬಂಧಪಟ್ಟವರಿಗೆ ಮಾಹಿತಿ ನೀಡಲಾಗಿದೆ.

ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆಗಿರುವ ದೊಡ್ಡ ಮೈದಾನವೆಂದರೆ ಅಜ್ಜಿಬೆಟ್ಟು ಗ್ರೌಂಡ್. ಆದರೆ ಇಲ್ಲಿ ಅನುದಾನದ ಕೊರತೆಯಿಂದ ಇದನ್ನು ಕ್ರೀಡಾಸ್ನೇಹಿಯಾಗಿ ರೂಪುಗೊಳಿಸಲಾಗಿಲ್ಲ. ಹಿಂದೆ ಈ ಮೈದಾನದಲ್ಲೇ ರಾಷ್ಟ್ರೀಯಮಟ್ಟದ ವಾಲಿಬಾಲ್ ಪಂದ್ಯಾಟವೂ ನಡೆದಿತ್ತು. ನಿರಂತರವಾಗಿ ಕ್ರೀಡಾಚಟುವಟಿಕೆ ಈ ಮೈದಾನದಲ್ಲಿ ನಡೆಯುತ್ತಿತ್ತು. ಇದಕ್ಕೊಂದು ಆವರಣ ನಿರ್ಮಾಣ ಸಹಿತ ಅಭಿವೃದ್ಧಿ ಕಾರ್ಯಗಳು ಆಗಬೇಕಾಗಿದೆ. ಈ ನಡುವೆ ಇರುವ ಮೈದಾನದಲ್ಲಿ ಹೊಂಡ ನಿರ್ಮಾಣಗೊಂಡಿರುವುದು ಹೇಗೆ ಎನ್ನುವುದು ಆತಂಕ ತಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net