ಭಕ್ತರ ಜಿಂದಗಿಯನ್ನು ಭಕ್ತಿ ಬಿಂದಿಗೆಯನ್ನಾಗಿಸಿದ ಪುಣ್ಯ ಪುರುಷ

A pious man who made the lives of his devotees a vessel of devotion
ಭೈನರನಹಟ್ಟಿ ಶ್ರೀ ದೊರೆಸ್ವಾಮಿ ವಿರಕ್ತಮಠದಲ್ಲಿ ಶುಕ್ರವಾರ 367ನೇ ಮಾಸಿಕ ಶಿವಾನುಭವ ಹಾಗೂ ಹಾನಗಲ್ ಶ್ರೀ ಗುರುಕುಮಾರ ಶಿವಯೋಗಿಗಳ ಪುಣ್ಯಸ್ಮರಣೋತ್ಸವ ಕಾರ್ಯಕ್ರಮ ಜರುಗಿತು. ಉಮೇಶಗೌಡ ಪಾಟೀಲ, ಶಾಂತಲಿಂಗ ಶ್ರೀಗಳು, ಕೆ.ಎ.ಬಳಿಗೇರ, ಪ್ರೊ. ಶಂಭು ಹೆಗಡಾಳ, ಅಪ್ಪಣ್ಣ ನಾಯ್ಕರ, ಎಸ್.ಜಿ. ಮಣ್ಣೂರಮಠ, ಚಂದ್ರು ದಂಡಿನ ಮತ್ತಿತರರಿದ್ದಾರೆ.
Published on

ಕುಳಗೇರಿ ಕ್ರಾಸ್: ಮೌಡ್ಯಾಚಾರಗಳಿಂದ ಆವೃತವಾಗಿದ್ದ ಸಮಾಜವನ್ನು ಉದ್ದರಿಸಲು ಜನಿಸಿದ ಕಾರಣಿಕ ಯುಗಪುರುಷ ಹಾನಗಲ್ ಕುಮಾರ ಸ್ವಾಮಿಗಳು ಅಧ್ಯಾತ್ಮದ ಅನುಸಂದಾನ ಮಾಡಿದ್ದಾರೆ ಎಂದು ನರಗುಂದ ಸಿಂಹಕೂಟದ ಅಧ್ಯಕ್ಷ ಉಮೇಶಗೌಡ ಪಾಟೀಲ ಹೇಳಿದರು.

ಭೈನರನಹಟ್ಟಿ ಶ್ರೀ ದೊರೆಸ್ವಾಮಿ ವಿರಕ್ತಮಠದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 367ನೇ ಮಾಸಿಕ ಶಿವಾನುಭವ ಹಾಗೂ ಹಾನಗಲ್ ಶ್ರೀ ಗುರುಕುಮಾರ ಶಿವಯೋಗಿಗಳ ಪುಣ್ಯಸ್ಮರಣೋತ್ಸವದಲ್ಲಿ ಮಾತನಾಡಿದ ಅವರು, ಪೂರ್ವಾಶ್ರಮದಲ್ಲಿ ಹಾಲಯ್ಯನವರಾಗಿದ್ದ ಶ್ರೀಗಳು ಹಾನಗಲ್ ವಿರಕ್ತಮಠದ ಕರ್ಣದಾರತ್ವವನ್ನು ಹೊಂದಿದ ಮೇಲೆ ಕುಮಾರ ಸ್ವಾಮಿಗಳಾಗಿ ಭಕ್ತರ ಜಿಂದಗಿಯನ್ನು ಭಕ್ತಿ ಬಿಂದಿಗೆಯನ್ನಾಗಿಸಿದರು. ಬುದ್ಧನ ದಯೆ, ಮಹಾವೀರನ ಅಹಿಂಸೆ, ಮಹಮದೀಯನ ನಿಷ್ಠೆ, ಏಸುವಿನ ಪ್ರೇಮ, ಬಸವಣ್ಣನ ಸಮಗ್ರ ಕ್ರಾಂತಿ, ವಿವೇಕಾನಂದರ ದೇಶಾಭಿಮಾನ, ಗಾಂಧೀಜಿಯ ತ್ಯಾಗ, ಅಹಿಂಸಾವಾದ ಗುಣಗಳನ್ನು ಹೊಂದಿದ್ದರು ಎಂದರು.

ಸಾನ್ನಿದ್ಯ ವಹಿಸಿದ್ದ ಶಾಂತಲಿಂಗ ಶ್ರೀಗಳು ಮಾತನಾಡಿ, ಸಂತ ವರ್ಗ ಸದೃಡವಾಗಬೇಕೆಂಬ ಉದ್ದೇಶದಿಂದ ಸ್ಥಾಪಿತವಾದ ಶಿವಯೋಗ ಮಂದಿರವು ಸ್ವಾಮಿಗಳಾಗುವವರಿಗೆ ಸ್ವಾಮಿತ್ವದ ಸಂಸ್ಕಾರ ನೀಡಿ, ಸಮಾಜ ತಿದ್ದುವ ಕಾರ್ಯವನ್ನು ದಣಿವರಿಯದೇ ಮಾಡುತ್ತಿದೆ. ಕುಮಾರ ಶ್ರೀಗಳು 1909ರಲ್ಲಿ ಬಳ್ಳಾರಿಯಲ್ಲಿ ವೀರಶೈವ ವಿದ್ಯಾವರ್ಧಕ ಸಂಘವನ್ನು ಸ್ಥಾಪಿಸಿದರು. ಸಮಾಜದ ಪ್ರತಿಯೊಂದು ಕ್ಷೇತ್ರವು ಪ್ರಗತಿ ಸಾಧಿಸಬೇಕು ಎಂಬ ಸದುದ್ಧೇಶ ಅವರದ್ದಾಗಿತ್ತು ಎಂದರು.

ಕೆ.ಎ.ಬಳಿಗೇರ, ಪ್ರೊ. ಶಂಭು ಹೆಗಡಾಳ, ಅಪ್ಪಣ್ಣ ನಾಯ್ಕರ, ಎಸ್.ಜಿ. ಮಣ್ಣೂರಮಠ, ಚಂದ್ರು ದಂಡಿನ, ವಿಶ್ರಾಂತ ಪ್ರಾಧ್ಯಾಪಕ ಪಿ.ಎಸ್. ಅಣ್ಣಿಗೇರಿ, ಚನ್ನಪ್ಪ ಕೀಲಿಕೈ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net