ಮುಂಡಗೋಡದಿಂದ ಅಂಜನಾದ್ರಿ ಬೆಟ್ಟಕ್ಕೆ ಯಾತ್ರೆ

MND HANUMA
Published on

ಮುಂಡಗೋಡ: ಹನುಮ ಮಾಲಾಧಾರಣೆ ಮಾಡಿದ್ದ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳದವರು ಗುರುವಾರ ಸಂಜೆ ಪಟ್ಟಣದ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅನ್ನ ಸಂತರ್ಪಣೆ ನಡೆಸಿ ಕೊಪ್ಪಳ ಬಳಿಯ ಅಂಜನಾದ್ರಿ ಬೆಟ್ಟಕ್ಕೆ ಯಾತ್ರೆ ಕೈಗೊಂಡರು.

ಪ್ರತಿವರ್ಷದಂತೆ ಈ ವರ್ಷವೂ ಹನುಮ ಮಾಲೆ ಧರಿಸಿರುವ ವಿಹಿಂಪ ಹಾಗೂ ಬಜರಂಗದಳದವರು ಪದಾಧಿಕಾರಿಗಳು ಕಟ್ಟಿಗೆ ಡಿಪೋ ಬಳಿಯ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅನ್ನ ಸಂತರ್ಪಣೆ ನಡೆಸಿ ನಂತರ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟಕ್ಕೆ ಯಾತ್ರೆ ಕೈಗೊಂಡರು.

ಬಜರಂಗದಳ ತಾಲೂಕು ಸಂಚಾಲಕ ಶಂಕರ ಲಮಾಣಿ, ವಿಹಿಂಪದ ತಂಗಂ ಚಿನ್ನನ್, ಅಯ್ಯಪ್ಪ ಭಜಂತ್ರಿ, ಪ್ರಕಾಶ ಬಡಿಗೇರ, ವಿಶ್ವನಾಥ ನಾಯರ್, ಶೇಖರ ಲಮಾಣಿ, ಶಾಂತರಾಜ್, ಲಕ್ಷ್ಮಣ ಲಮಾಣಿ, ಇತರ ಮಾಲಾಧಾರಿಗಳು ಯಾತ್ರೆ ಕೈಗೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net