ಬೆಂಕಿ ತಗುಲಿ ಮೇವಿನ ಬಣವೆ ಭಸ್ಮ

Mize Cot Fire
Published on

ಶಿಗ್ಗಾಂವಿ: ಬೆಂಕಿ ತಗುಲಿ ಮೇವಿನ ಬಣವೆ ಸುಟ್ಟು ಅಪಾರ ಪ್ರಮಾಣದ ಹಾನಿ ಸಂಭವಿಸಿದ ಘಟನೆ ತಾಲೂಕಿನ ಹುಲಿಕಟ್ಟಿ ಗ್ರಾಮದಲ್ಲಿ ಶುಕ್ರವಾರ ಸಂಭವಿಸಿದೆ.

ಗ್ರಾಮದ ಉಳವಯ್ಯ ಚಿಗರಿಮಠ ಅವರಿಗೆ ಸೇರಿದೆ.

ಸುಮಾರು 5 ಎಕರೆ ಜಮೀನಿನಲ್ಲಿ ಬೆಳೆದ ಗೋವಿನ ಜೋಳ, ಹಲಸಂದಿ, ತೊಗರಿಯ ಮೇವುಗಳ ಬಣವೆಗಳು ಬೆಂಕಿಗೆ ಆಹುತಿಯಾಗಿವೆ.

ಸ್ಥಳಕ್ಕೆ ಆಗಮಿಸಿದ ಶಿಗ್ಗಾಂವಿ ಅಗ್ನಿಶಾಮಕ ದಳದ ಸಿಬ್ಬಂದಿ ಗ್ರಾಮಸ್ಥರ ಸಹಾಯದಿಂದ ಬೆಂಕಿ ನಂದಿಸಿ ಹೆಚ್ಚಿನ ಹಾನಿಯನ್ನು ತಪ್ಪಿಸಿದ್ದಾರೆ.

ಸಿಬ್ಬಂದಿ ಗಣೇಶ ಗೌಡರ, ಶಿದ್ದಪ್ಪ ರಿತ್ತಿ, ಆನಂದ ಪೂಜಾರ, ಬಾಹುಬಲಿ ಬಾಗನ್ನವರ, ಬಸವರಾಜ ಮಾದರ, ಅಮಿತ ಶಿರಮಾಜಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net