ಸಂಬಂಧಿಕರ ವಿವಾಹಕ್ಕೆಂದು ತೆರಳಿದವ ನಾಪತ್ತೆ

11-pnp 2 chaluvegowda missing
ಕಾಣೆಯಾದ ವ್ಯಕ್ತಿ ಚಲುವೇಗೌಡ
Published on

ಪಾಂಡವಪುರ: ಸಂಬಂಧಿಕರ ವಿವಾಹಕ್ಕೆಂದು ಮನೆಯಿಂದ ಹೊರಹೋದವರು ನಾಪತ್ತೆಯಾಗಿರುವ ಕುರಿತು ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದ ಚಲುವೇಗೌಡ (62) ಕಾಣೆಯಾದವ. ಚಿನಕುರಳಿ ಗ್ರಾಮದಲ್ಲಿ ಆಯೋಜಿಸಿದ್ದ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲೆಂದು ಮಾ.21ರಂದು ಬೆಳಗ್ಗೆ 10 ಗಂಟೆ ಸಮಯಯಲ್ಲಿ ಮನೆಯಿಂದ ಹೋದವರು ಈವರೆಗೂ ಪತ್ತೆಯಾಗಿಲ್ಲ. ಅಲ್ಲದೆ ಈತ ಆಗಾಗ್ಗೆ ಮನೆ ಬಿಟ್ಟು ಹೋಗಿ ಎರಡ್ಮೂರು ದಿನಗಳಲ್ಲಿ ವಾಪಸ್ಸಾಗುತ್ತಿದ್ದರು. ಆದರೆ ಈ ಬಾರಿ ವಾಪಸ್ ಬರಲಿಲ್ಲ ಎಂದು ಆತನ ಪುತ್ರ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಚಹರೆ : ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಬಣ್ಣವಿದ್ದು, ಕಾಣೆಯಾದ ದಿನ ಬಿಳಿ ಶರ್ಟ್, ಬಣ್ಣದ ಲುಂಗಿ ಹಾಗೂ ಕೆಂಪು ಟವೆಲ್ ಧರಿಸಿದ್ದರು. ಇವರ ಬಗ್ಗೆ ಸುಳಿವು ಸಿಕ್ಕಲ್ಲಿ ಪಾಂಡವಪುರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net