ಬಸ್ಸಿಗೆ ಕಾಯುತ್ತಿದ್ದವನಿಗೆ ಕರೆಂಟ್ ಶಾಕ್

24bdvt2
ಭದ್ರಾವತಿ ಮಿಲಿಟರಿ ಕ್ಯಾಂಪ್ ಬಳಿ ರಸ್ತೆಗೆ ಅಡ್ಡಲಾಗಿ ಬಿದ್ದಿರುವ ವಿದ್ಯುತ್ ತಂತಿಯಿಂದಾಗಿ ರಸ್ತೆಯಲ್ಲಿ ಬೆಂಕಿ ಹೊತ್ತಿಕೊಂಡಿರುವುದು.
Published on

ಭದ್ರಾವತಿ: ಮಿಲಿಟರಿ ಕ್ಯಾಂಪ್ ಸರ್ಕಲ್ ಬಳಿ ವಿದ್ಯುತ್ ತಂತಿ ಕಟ್ಟಾಗಿ ರಸ್ತೆಗೆ ಬಿದ್ದ ಪರಿಣಾಮ ಬಸ್ಸಿಗೆ ಕಾಯುತ್ತ ನಿಂತಿದ್ದ ವ್ಯಕ್ತಿಗೆ ವಿದ್ಯುತ್ ಶಾಕ್ ಹೊಡೆದ ವಿಡಿಯೋ ವೈರಲ್ ಆಗಿದೆ. ಹೊಸಬುಳ್ಳಾಪುರ ನಿವಾಸಿ ಗೋವಿಂದಪ್ಪ ಎಂಬುವವವರು ತಮ್ಮ ತಾಯಿಯ ಸಾವಿನ 3ನೇ ದಿನದ ಕಾರ್ಯಕ್ಕೆ ಹೊಸ ಬುಳ್ಳಾಪುರದಿಂದ ನಗರದ ಹೊಸಮನೆ ಬಡಾವಣೆ ಕಡೆಗೆ ಬರಲು ಭಾನುವಾರ ಬೆಳಗ್ಗೆ ಕೆಎಸ್‌ಆರ್‌ಟಿಸಿ ಬಸ್‌ಗೆ ಕಾಯುತ್ತ ಮಿಲಿಟರಿ ಕ್ಯಾಂಪ್ ಸರ್ಕಲ್‌ನಲ್ಲಿ ನಿಂತಿದ್ದು ಆಗ ಏಕಾಏಕಿ ವಿದ್ಯುತ್ ಕಂಬದ ಮೇಲಿನಿಂದ ರಸ್ತೆ ಅಡ್ಡಲಾಗಿ ಹೈಟೆನ್ಷನ್ ವಿದ್ಯುತ್ ತಂತಿ ಬಿದ್ದಿದೆ. ಬೀಳುವ ರಭಸಕ್ಕೆ ತಂತಿ ಇವರ ಮೇಲಿನಿಂದ ಹಾದು ಹೋಗಿ ಶಾಕ್ ಹೊಡೆದಿದೆ. ಶಾಕ್‌ನಿಂದಾಗಿ ನೆಲಕ್ಕೆ ಬಿದ್ದ ಅವರನ್ನು ಅಲ್ಲಿಯೇ ಇದ್ದ ಆಟೋ ಚಾಲಕರೊಬ್ಬರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆೆ. ತಕ್ಷಣವೇ ಸಾರ್ವಜನಿಕರು ಮೆಸ್ಕಾಂ ಕಚೇರಿಗೆ ಕರೆ ಮಾಡಿ ವಿಷಯ ಮುಟ್ಟಿಸಿ ವಿದ್ಯುತ್ ತೆಗೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net