ಭಾರೀ ಮಳೆಯಿಂದ ಬೆಣ್ಣೆ ಹಳ್ಳದಲ್ಲಿ ಸಿಲುಕಿದ್ದ ವ್ಯಕ್ತಿಯ ರಕ್ಷಣೆ

Rain
Published on

ಧಾರವಾಡ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಹಳ್ಳ-ಕೊಳ್ಳಗಳು ತುಂಬಿಹೋಗಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಹಲವೆಡೆ ಮನೆಗಳು ಮುಳುಗಿದ್ದಯ ಜನರು ಪರದಾಡುವಂತಾಗಿದೆ.

ಇನ್ನು ಹಳ್ಳಗಳಲ್ಲಿ ನೀರು ತುಂಬಿ ಹಲವರು ಸಿಲುಕಿರುವ ಪ್ರಸಂಗಗಳು ಎದುರಾಗಿವೆ. ಇದೇ ರೀತಿ ನವಲಗುಂದ ತಾಲೂಕಿನಲ್ಲಿರುವ ಬೆಣ್ಣೆ ಹಳ್ಳ ಭಾರೀ ಮಳೆಯಿಂದ ತುಂಬಿಹೋಗಿತ್ತು. ವ್ಯಕ್ತಿಯೊಬ್ಬ ಸಿಲುಕಿ ಸಹಾಯಕ್ಕಾಗಿ ಪರದಾಡುತ್ತಿದ್ದ. ಹಳ್ಳದ ತಟದಲ್ಲಿರುವತ್ತ ಕೈ ಬೀಸಿದ್ದನ್ನು ಗಮನಿಸಿದ ಕೆಲವರು ಅಲ್ಲೊಬ್ಬ ವ್ಯಕ್ತಿ ರಕ್ಷಣೆಗಾಗಿ ಮೊರೆ ಇಡುತ್ತಾನೆ ಎಂದು ತಿಳಿದು ಕೂಡಲೇ ರಕ್ಷಣಾ ಸಿಬ್ಬಂದಿಗೆ ಮಾಹಿತಿ ಮುಟ್ಟಿಸಿದರು.

ತಾಲೂಕು ಆಡಳಿತಕ್ಕೆ ಮಾಹಿತಿ ಮುಟ್ಟಿಸಿದ ಕೆಲವೇ ಸಮಯದಲ್ಲಿ ಅಗ್ನಿಶಾಮಕ ಸಿಬ್ಬಂದಿ ಬೋಟ್​ ಹೊತ್ತು ವ್ಯಕ್ತಿಯತ್ತ ಧಾವಿಸಿ, ಆತನನ್ನು ರಕ್ಷಿಸಿದ್ದಾರೆ. ಪೊಲೀಸರು ಕೂಡ ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿದ್ದರು. (ದಿಗ್ವಿಜಯ ನ್ಯೂಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net