ಮನೆ ಮಹಡಿ ಮೇಲಿಂದ ಬಿದ್ದು ವ್ಯಕ್ತಿ ಸಾವು

04SHASHI02
ಶಶಿ
Published on

ಸುಂಟಿಕೊಪ್ಪ: ಇಲ್ಲಿನ ಮನೆಯೊಂದರ ಮಹಡಿ ಮೇಲಿಂದ ಆಯಾ ತಪ್ಪಿ ಬಿದ್ದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಸ್ಥಳೀಯ ನಿವಾಸಿ, ವೃತ್ತಿಯಲ್ಲಿ ಮೆಕ್ಯಾನಿಕ್ ಆಗಿದ್ದ, ಗ್ರಾಪಂ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಂಧ್ಯಾ ಅವರ ಪತಿ, ಶಶಿ (40) ಮೃತಪಟ್ಟವರು. ಮನೆಯ ಹಿಂಭಾಗದ ಮಹಡಿ ಮೇಲೆ ನಿಂತಿದ್ದ ವೇಳೆ ಆಯಾತಪ್ಪಿ ಶೀಟಿನ ಮೇಲೆ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಶಶಿ ಅವರನ್ನು ಕೂಡಲೇ ಮಡಿಕೇರಿ ಜಿಲ್ಲಾಸ್ಪತ್ರೆಗೆ ರವಾನಿಸಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಇವರಿಗೆ ಪುತ್ರಿ, ಪುತ್ರ ಇದ್ದಾರೆ. ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net